ಗಂಗಾವತಿ:ಸಾಮಾನ್ಯ ವ್ಯಕ್ತಿಗಳ ದೈನಂದಿಕ ಜೀವನ ನಿರ್ವಹಣೆಯ ಹರಸಾಹಸಗಳ ಕಥಾ ಹಂದರ ಹೊಂದಿರುವ ಯಜ್ಞಕುಂಡ ಎಂಬ ಸಾಮಾಜಿಕ ಕಿರು ಚಿತ್ರದ ಟ್ರೇಲರ್, ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ನಗರದಲ್ಲಿ ಸರಳವಾಗಿ ನೆರವೇರಿತು.
ಕಿರು ಚಿತ್ರ ಯಜ್ಞಕುಂಡದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ - ಟೀಸರ್ ಮತ್ತು ಪೋಸ್ಟರ್ ಬಿಡುಗಡೆ
ಸಾಮಾನ್ಯ ವ್ಯಕ್ತಿಗಳ ದೈನಂದಿಕ ಜೀವನ ನಿರ್ವಹಣೆಯ ಹರಸಾಹಸಗಳ ಕಥಾ ಹಂದರ ಹೊಂದಿರುವ ಯಜ್ಞಕುಂಡ ಎಂಬ ಸಾಮಾಜಿಕ ಕಿರು ಚಿತ್ರದ ಟ್ರೇಲರ್, ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ನಗರದಲ್ಲಿ ಅತ್ಯಂತ ಸರಳವಾಗಿ ನೆರವೇರಿತು.
ಯಜ್ಞಕುಂಡ ಕಿರು ಚಿತ್ರ
ಗಂಗಾವತಿಯ ಯುವ ಪ್ರತಿಭೆ ಶರಣ ಬಸವ ಅವರ ನಿರ್ಮಾಣ ಸಾರಥ್ಯದ ಯಜ್ಞಕುಂಡ ಎಂಬ ಕಿರುಚಿತ್ರ ಏಕಕಾಲಕ್ಕೆ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಗಂಗಾವತಿಯ ಮತ್ತೊಬ್ಬ ಯುವ ಕಲಾವಿದ ಸ್ವಾಮಿ ನಿರ್ದೇಶನ ಮಾಡಿದ್ದಾರೆ.
ಇನ್ನು ಟೀಸರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಕಲ್ಯಾಣ ಕರ್ನಾಟಕ ಭಾಗದ ಯುವ ಪ್ರತಿಭಾವಂತರು ಹಿರಿ-ಕಿರಿ ತೆರೆ ಮೇಲೆ ಬರುತ್ತಿರುವುದು ಸಂತಸದ ವಿಚಾರ ಎಂದರು. ಹೆಚ್ಚು ಪರಿಶ್ರಮ, ಗುಣಮಟ್ಟದ ಕಥಾನಕ ಚಿತ್ರವಿದ್ದರೆ ಜನ ಸ್ವಾಗತಿಸುತ್ತಾರೆ. ಈ ನಿಟ್ಟಿನಲ್ಲಿ ತಂಡ ಯತ್ನ ಮಾಡಲಿ ಎಂದರು.