ಕರ್ನಾಟಕ

karnataka

ETV Bharat / state

ಕೊಪ್ಪಳ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ... ವಾಹನ ಸವಾರರಿಗೆ ಆತಂಕ

ಕೊಪ್ಪಳ ನಗರದಲ್ಲಿ ಇಷ್ಟು ದಿನ ತುಸು ಕಡಿಮೆಯಾಗಿದ್ದ ಬಿಡಾಡಿ ದನಗಳ ಹಾವಳಿ ಈಗ ಮತ್ತೆ ಶುರುವಾಗಿದೆ. ನಗರದ ಪ್ರಮುಖ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಈ ಬಿಡಾಡಿಗಳ ದನಗಳಿಂದಾಗಿ ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.

ಕೊಪ್ಪಳ ರಸ್ತೆಗಳಲ್ಲಿ ಮತ್ತೆ ಹೆಚ್ಚಾಯ್ತು ಬಿಡಾಡಿ ದನಗಳ ಹಾವಳಿ

By

Published : Sep 6, 2019, 7:29 PM IST

ಕೊಪ್ಪಳ: ನಗರದಲ್ಲಿ ಇಷ್ಟು ದಿನ ತುಸು ಕಡಿಮೆಯಾಗಿದ್ದ ಬಿಡಾಡಿ ದನಗಳ ಹಾವಳಿ ಈಗ ಮತ್ತೆ ಶುರುವಾಗಿದೆ. ನಗರದ ಪ್ರಮುಖ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಈ ಬಿಡಾಡಿಗಳ ದನಗಳಿಂದಾಗಿ ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.

ಕೊಪ್ಪಳ ರಸ್ತೆಗಳಲ್ಲಿ ಮತ್ತೆ ಹೆಚ್ಚಾಯ್ತು ಬಿಡಾಡಿ ದನಗಳ ಹಾವಳಿ
ನಗರದಲ್ಲಿ ಇದೀಗ ಎಲ್ಲೆಂದರಲ್ಲಿ ಹಿಂಡುಗಟ್ಟಲೇ ಬಿಡಾಡಿ ದನಗಳು ಕಾಣುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಒಂದು ಮಾಹಿತಿಯ ಪ್ರಕಾರ ಈ ದನಗಳಿಗೆ ಮಾಲೀಕರು ಇದ್ದಾರೆ. ಅವರೇ ಇವುಗಳನ್ನು ನಗರದಲ್ಲಿ‌ ಮೇಯಲು ಬಿಡುತ್ತಿದ್ದಾರೆ.ಸಣ್ಣ ಸಣ್ಣ ಕರುಗಳೊಂದಿಗೆ ನಗರದ ಮುಖ್ಯರಸ್ತೆ, ಜವಾಹರ ರಸ್ತೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ಇವು ಕಂಡುಬರುತ್ತಿದ್ದು, ವಾಹನ ಸವಾರರು ಭಯದಲ್ಲಿಯೇ ವಾಹನ ಚಲಾಯಿಸಿಕೊಂಡು ಹೋಗಬೇಕಿದೆ. ಕೆಲವೊಮ್ಮೆ ಈ ಬಿಡಾಡಿ ದನಗಳು ಗುದ್ದಾಡುತ್ತಾ, ರಸ್ತೆಯಲ್ಲಿ ಓಡಾಡಿದರೆ ಇನ್ನೊಂದು ಕಡೆ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿಕೊಂಡಿರುತ್ತವೆ. ಹೀಗಾಗಿ ವಾಹನ ಸವಾರರಿಗೆ ಪ್ರಾಣಭಯ ಕಾಡುತ್ತಿದೆ.


ಇನ್ನು ಪಾದಚಾರಿಗಳು ಸಹ ಆತಂಕ ಎದುರಿಸುವಂತಾಗಿದೆ. ಅಲ್ಲದೇ ಕೆಲವೊಮ್ಮೆ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಹೀಗಾಗಿ, ನಗರದ ಪ್ರಮುಖ ಕೆಲ ರಸ್ತೆಗಳಲ್ಲಿ ವಾಹನ ಚಲಾಯಿಸೋದು ಒಂದು ರೀತಿಯಲ್ಲಿ ಹರಸಾಹಸ ಎನ್ನುವಂತಾಗಿದೆ.






ABOUT THE AUTHOR

...view details