ಗಂಗಾವತಿ:ತಾಲೂಕಿನ ಶ್ರೀರಾಮನಗರದ ಭತ್ತದ ಗದ್ದೆಯಂತ ಬಯಲು ಪ್ರದೇಶದಲ್ಲಿ ಚಿರತೆ ಕಂಡು ಬಂದಿದ್ದು, ಇದೀಗ ಗ್ರಾಮಸ್ಥರ ನಿದ್ದೆಗೆಡಿಸಿದೆ. ಗ್ರಾಮಸ್ಥರ ಮನವಿ ಮೆರೆಗೆ ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಗಂಗಾವತಿಯಿಂದ ಹೈದರಾಬಾದ್ಗೆ ತೆರಳುತ್ತಿದ್ದ ಖಾಸಗಿ ಸಾರಿಗೆ ಸಂಸ್ಥೆಯ ಚಾಲಕ ಮೊದಲಿಗೆ ಭತ್ತದ ಗದ್ದೆಯಲ್ಲಿದ್ದ ಚಿರತೆಯನ್ನು ಗಮನಿಸಿದ್ದು ಬಳಿಕ ವಾಹನದಲ್ಲಿದ್ದ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಪ್ರಯಾಣಿಕರು ತಮಗೆ ಪರಿಚಯವಿದ್ದವರಿಗೆಲ್ಲಾ ದೂರವಾಣಿ ಕರೆ ಮಾಡಿ ಮಾಹಿತಿ ರವಾನಿಸಿದ್ದಾರೆ.