ಕುಷ್ಟಗಿ (ಕೊಪ್ಪಳ): ಕಳೆದ ರಾತ್ರಿ ಧಾರಾಕಾರ ಮಳೆಯಿಂದ ಕುಷ್ಟಗಿ ತಾಲೂಕಿನ ಮುದೇನೂರು-ದೋಟಿಹಾಳ ಸಂಪರ್ಕಿಸುವ ತಾತ್ಕಾಲಿಕ ಸೇತುವೆ ಪುನಃ ಕೊಚ್ಚಿ ಹೋಗಿದೆ.
ದೋಟಿಹಾಳ-ಮುದೇನೂರು ಬನ್ನಟ್ಟಿ ಬಳಿ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಮುದೇನೂರು-ದೋಟಿಹಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಈ ರಸ್ತೆಯ ಮೇಲೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಭಾರಿ ಮಳೆಯಾಗಿ ತಾತ್ಕಾಲಿಕ ಸೇತುವೆ ನೀರುಪಾಲಾಗಿದೆ.
ಮತ್ತೆ ಕೊಚ್ಚಿ ಹೋದ ಮುದೇನೂರು-ದೋಟಿಹಾಳ ತಾತ್ಕಾಲಿಕ ಸೇತುವೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿರುವುದರಿಂದ ಮುದೇನೂರು-ದೋಟಿಹಾಳ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಮುದೇನೂರು, ಕಂದಗಲ್, ಹಿರೇ ಓತಗೇರಿ ಮೂಲಕ ಇಲಕಲ್, ತೆಗ್ಗಿಹಾಳ, ಟೆಂಗುಂಟಿ ಮೂಲಕ ಕುಷ್ಟಗಿಗೆ ಸುತ್ತುವರಿದು ಹೋಗುವುದು ಅನಿವಾರ್ಯವಾಗಿದೆ.
ಅಂದಾಜು 5 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದಿದೆ. ಈ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮಳೆಯ ನೆಪವಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸೇತುವೆ ಪೂರ್ಣಗೊಳಿಸಲು ಪ್ರಯತ್ನಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.