ಕರ್ನಾಟಕ

karnataka

ETV Bharat / state

ಐವರ ವಶಕ್ಕೆ ಪಡೆದು ಮಸೀದಿ ಕಾಂಪ್ಲೆಕ್ಸ್​ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಪೊಲೀಸ್

ಗಂಗಾವತಿಯಲ್ಲಿ ಮಸೀದಿಯ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದವರನ್ನು ವಶಕ್ಕೆ ಪಡೆದ ಪೊಲೀಸರು ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟರು.

Masjid Building Construction
ಮಸೀದಿ ಕಟ್ಟಡ ನಿರ್ಮಾಣ

By

Published : Jun 8, 2021, 11:00 AM IST

ಗಂಗಾವತಿ:ಇಲ್ಲಿನ ಬೇರೂನಿ‌ ಮಸೀದಿಯ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.

ಮಸೀದಿ ಕಾಂಪ್ಲೆಕ್ಸ್ ನಿರ್ಮಾಣ ಮಾಡುತ್ತಿರುವ ಜಾಗ ಮಾದಿಗ ಸಮುದಾಯಕ್ಕೆ ಸೇರಿದ್ದು, ಇಲ್ಲಿ ಕಟ್ಟಡ ನಿರ್ಮಾಣ ಮಾಡಿ ಮಸೀದಿಯ ಆಡಳಿತ ಸಮಿತಿಯು ಅನಗತ್ಯ ವಿವಾದ ಸೃಷ್ಟಿಸಲು ಮುಂದಾಗಿದೆ ಎಂದು ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದ ಜಿಲ್ಲಾಧಿಕಾರಿಯವರೆಗೂ ಹೋಗಿತ್ತು.

ಪೊಲೀಸ್ ಬಂದೋ ಬಸ್ತ್​ನಲ್ಲಿ ನಡೆದ ಮಸೀದಿ ಕಟ್ಟಡ ನಿರ್ಮಾಣ ಕಾರ್ಯ

ದಾಖಲೆ ಪರಿಶೀಲಿಸಿದ ಜಿಲ್ಲಾಧಿಕಾರಿ ಮಸೀದಿ ಸಮಿತಿಗೆ ಕಟ್ಟಡ ನಿರ್ಮಿಸಲು ಅನುಮತಿ ಕೊಟ್ಟಿದ್ದಾರೆ. ಮುಂಜಾಗೃತ ಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾದಿಗ ಸಮುದಾಯದ ಮುಖಂಡ ಹುಸೇನಪ್ಪ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗದಂತೆ ಕಲಂ 144 ಜಾರಿ ಮಾಡಿರುವ ತಹಶೀಲ್ದಾರ್ ಯು. ನಾಗರಾಜ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಭದ್ರತೆಗಾಗಿ ಡಿವೈಎಸ್ಪಿ ಉಜ್ಜನಕೊಪ್ಪ, ಸಿಪಿಐಗಳಾದ ವೆಂಕಟಸ್ವಾಮಿ, ಉದಯರವಿ ಅವರನ್ನು ನಿಯೋಜಿಸಲಾಗಿದೆ. ನಗರಸಭೆ ಆಯುಕ್ತ ಅರವಿಂದ ಜಮಖಂಡಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

ಇದನ್ನೂಓದಿ : ಸಿಡಿ ಪ್ರಕರಣ: ಇಂದು ನರೇಶ್, ಶ್ರವಣ್ ಜಾಮೀನು ಅರ್ಜಿ ತೀರ್ಪು

ABOUT THE AUTHOR

...view details