ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಜನರ ಬಂಧನ.. ವಾಹನ-ಚಿನ್ನಾಭರಣ ವಶ

ಗಂಗಾವತಿಯಲ್ಲಿ ಕೇವಲ 24 ಗಂಟೆಯಲ್ಲಿ ಎರಡು ಪ್ರತ್ಯೇಕ ಪ್ರಕರಣವನ್ನು ಭೇದಿಸಿದ ಪೊಲೀಸರು- ಆರು ಜನ ಆರೋಪಿಗಳ ಬಂಧಣ- ಚಿನ್ನಾಭರಣ, ವಾಹನ ವಶಕ್ಕೆ

By

Published : Jul 24, 2022, 6:32 PM IST

ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಜನರ ಬಂಧನ
ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಜನರ ಬಂಧನ

ಗಂಗಾವತಿ(ಕೊಪ್ಪಳ): ಮನೆಗಳ್ಳತನ ಮತ್ತು ಸಾರ್ವಜನಿಕ ಸ್ಥಳಗಳಿಂದ ಬೈಕ್ ಕಳ್ಳತನ ಮಾಡಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಕೇವಲ 24 ಗಂಟೆಯಲ್ಲಿ ಭೇದಿಸಿದ ಗಂಗಾವತಿ ನಗರಠಾಣೆಯ ಪೊಲೀಸರು, ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿವೈಎಸ್​ಪಿ ರುದ್ರೇಶ ಉಜ್ಜನಕೊಪ್ಪ ಅವರು ಮಾತನಾಡಿರುವುದು

ಬಂಧಿತ ಇಬ್ಬರು ಆರೋಪಿಗಳಿಂದ 4.70 ಲಕ್ಷ ಮೌಲ್ಯದ ಬಂಗಾರದ ಒಡವೆ ಹಾಗೂ ಮತ್ತೊಂದು ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಂದ ಆರು ಬೈಕ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿವೈಎಸ್​ಪಿ ಆರ್. ಎಸ್ ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಈ ಎರಡು ಪ್ರಕರಣಗಳನ್ನು ಭೇದಿಸಿದ್ದಾರೆ.

ಘಟನೆಯ ವಿವರ: ನಗರಠಾಣೆಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರ ತಂಡವು ಗೌಸಿಯಾ ಕಾಲೋನಿಯ ತರಕಾರಿ ವ್ಯಾಪಾರಿ ಮೊಹಮ್ಮದ್ ಖಾಜಾ ಹುಸೇನಸಾಬ ಹಾಗೂ ಮಹೆಬೂಬನಗರದ ಕಾರು ಚಾಲಕ ಗೌಸ್ಪಾಷಾ ಜಾವೀದ್ ಅಲಿ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 4.70 ಲಕ್ಷ ಮೌಲ್ಯದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಸಾರ್ವಜನಿಕ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ದೂರುಗಳಿಗೆ ಸಂಬಂಧಿಸಿದಂತೆ ಅಮರಭಗತ್ ಸಿಂಗ್ ನಗರದ ಟೈಲ್ಸ್ ಕೆಲಸ ಮಾಡುತ್ತಿದ್ದ ರಾಜಾಭಕ್ಷಿ ಗಫೂರಸಾಬ, ವಿದ್ಯಾರ್ಥಿ ಪ್ರವೀಣಕುಮಾರ ವೀರಯ್ಯಸ್ವಾಮಿ ಹಿರೇಮಠ ಹಾಗೂ ಇತರ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ.

ಓದಿ:ಸಂಬಳ ಕೇಳಿದ್ದೇ ತಪ್ಪಾ!? ಮಹಿಳೆಗೆ ಒದ್ದು, ಕಪಾಳಮೋಕ್ಷ.. ಸ್ಪಾ ಮಾಲೀಕನ ಕ್ರೌರ್ಯ ಸಿಸಿಟಿವಿಯಲ್ಲಿ ಸೆರೆ

ABOUT THE AUTHOR

...view details