ಗಂಗಾವತಿ:ತಾಲೂಕಿನ ಸಂಗಾಪುರ ಗ್ರಾಮದ ಮಹಿಳೆಯೊಬ್ಬರನ್ನು ಸೀಮೆಎಣ್ಣೆ ಹಾಕಿ ಜೀವಂತ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ. ಜಿ ಶಿವಳ್ಳಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಏಳು ವರ್ಷದ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ ಈ ಬಗ್ಗೆ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ ಮಾಹಿತಿ ನೀಡಿದ್ದು, ಸಂಗಾಪುರ ಗ್ರಾಮದ ಸುಜಾತ ಶರಣಪ್ಪ ಎಂಬ ಮಹಿಳೆಯನ್ನು ಅದೇ ಗ್ರಾಮದ ಬಾಲಪ್ಪ ಗೋವಿಂದಪ್ಪ ಎಂಬ ಆರೋಪಿ ಮಧ್ಯರಾತ್ರಿ ಮಹಿಳೆಯ ಮನೆಗೆ ತೆರಳಿ ಸೀಮೆಎಣ್ಣೆ ಹಾಕಿ ಕೊಲೆ ಮಾಡಿದ್ದ.
ಏಳು ವರ್ಷದ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ 27.07.2015ರಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ಮಹಿಳೆ ವಿಧವೆಯಾಗಿದ್ದು, ಒಂಟಿಯಾಗಿ ಜೀವನ ನಡೆಸುತ್ತಿದ್ದ ಹಿನ್ನೆಲೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದ ಆರೋಪಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಸಹಕರಿಸದ ಹಿನ್ನೆಲೆ ಈ ಕೃತ್ಯ ಎಸಗಿದ್ದ.
ಅಲ್ಲದೇ ಮೃತಳ ಪುತ್ರ ಭಾರ್ಗವರಾಮ ತನ್ನ ತಾಯಿಯ ಸಾವಿಗೆ ಪರಿಹಾರಕ್ಕೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ನ್ಯಾಯಾಧೀಶರು ಸಲಹೆ ನೀಡಿದ್ದಾರೆ ಎಂದು ಎಪಿಪಿ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ ತಿಳಿಸಿದ್ದಾರೆ.
ಓದಿ:ನೆಲಮಂಗಲ: ಡ್ರಗ್ಸ್ - ಕಳ್ಳತನದಲ್ಲಿ ತೊಡಗಿದ್ದ 13 ಆರೋಪಿಗಳ ಬಂಧಿಸಿದ ಪೊಲೀಸರು