ಕುಷ್ಟಗಿ (ಕೊಪ್ಪಳ): ಜಾತ್ರೆ, ಉತ್ಸವಗಳ ಫ್ಲೆಕ್ಸ್ಗಳಲ್ಲಿ ರಾಜಕಾರಣಿಗಳು, ಗಣ್ಯರ ಫೋಟೋಗಳನ್ನು ಹಾಕುವುದು ಸಾಮಾನ್ಯ. ಆದರೆ, ಶ್ರೀಶರಣ ಬಸವೇಶ್ವರ ಜಾತ್ರಾ ಮಹೋತ್ಸದ ಫ್ಲೆಕ್ಸ್ನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಫೋಟೋ ಹಾಕಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿಯಲ್ಲಿ ಶ್ರೀಶರಣಬಸವೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಸ್ವಾಗತಿಸಲು ಕೆಲ ಯುವಕರು ತಮ್ಮ ಭಾವಚಿತ್ರದ ಜೊತೆಗೆ ನಟಿ ಸನ್ನಿ ಲಿಯೋನ್ ಫೋಟೋ ಫ್ಲೆಕ್ಸ್ನಲ್ಲಿ ಹಾಕಿಸಿದ್ದಾರೆ.