ಕರ್ನಾಟಕ

karnataka

ETV Bharat / state

ನಟ ರವಿ ಶಂಕರ್​ ಕಂಠದಿಂದ ಹೊರಹೊಮ್ಮಿದ 'ಆಕಾಶದಿಂದ ಧರೆಗಿಳಿದ ರಂಭೆ': ವಿಡಿಯೋ ವೈರಲ್ - actor ravishankar latest news

ಕುಷ್ಟಗಿಯ ಕರೋಕೆ ಸ್ಟುಡಿಯೋವೊಂದರಲ್ಲಿ ನಟ ಆರುಮುಗಂ ರವಿಶಂಕರ್ ಅವರು "ಆಕಾಶದಿಂದ ಧರೆಗಿಳಿದ ರಂಭೆ.. ಇವಳೇ ಇವಳೇ ಚಂದನದ ಗೊಂಬೆ" ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡಿನ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

actor ravishankar
ನಟ ರವಿಶಂಕರ್​ ಹಾಡು

By

Published : Feb 18, 2021, 12:46 PM IST

ಕೊಪ್ಪಳ:ಜಿಲ್ಲೆಯ ಕುಷ್ಟಗಿ ಪಟ್ಟಣದ ಕರೋಕೆ ಸ್ಟುಡಿಯೋವೊಂದರಲ್ಲಿ ನಟ ಆರುಮುಗಂ ರವಿಶಂಕರ್ ಹಾಡಿರುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ನಟ ರವಿಶಂಕರ್​ ಹಾಡು ವೈರಲ್​

ಚಲನಚಿತ್ರವೊಂದರ ಚಿತ್ರೀಕರಣಕ್ಕಾಗಿ ಇತ್ತೀಚಿಗೆ ಗಜೇಂದ್ರಗಡಕ್ಕೆ ಆಗಮಿಸಿದ್ದ ನಟ ರವಿಶಂಕರ್ ಅವರು ಕುಷ್ಟಗಿ ಪಟ್ಟಣದ ಸಂಘಟಕ ವಜೀರ್​ ಅಲಿ ಗೋನಾಳ ಅಚರ ಮನೆಗೆ ಭೇಟಿ ನೀಡಿದ್ದರು. ಬಳಿಕ ವಜೀರ ಅವರ ಕರೋಕೆ ಸ್ಟುಡಿಯೋದಲ್ಲಿ "ಆಕಾಶದಿಂದ ಧರೆಗಿಳಿದ ರಂಭೆ.. ಇವಳೇ ಇವಳೇ ಚಂದನದ ಗೊಂಬೆ" ಎಂಬ ಹಾಡನ್ನು ಹಾಡಿದ್ದಾರೆ.

ರವಿಶಂಕರ್ ಹಾಡಿರುವ ಈ ಹಾಡಿನ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ABOUT THE AUTHOR

...view details