ಕರ್ನಾಟಕ

karnataka

ETV Bharat / state

ಬ್ಲ್ಯಾಕ್​ ಫಂಗಸ್​ಗೆ ಇಂಜೆಕ್ಷನ್ ಇಲ್ಲ ಎಂದ ಜಿಲ್ಲಾಸ್ಪತ್ರೆ... 2 ದಿನಗಳಿಂದ ಚುಚ್ಚುಮದ್ದು ನೀಡದ ಆರೋಪ! - ಕೊಪ್ಪಳ ಸುದ್ದಿ

ಕೊಪ್ಪಳ ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್​ನಿಂದ ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಅವಶ್ಯವಿದೆ. ಆದರೆ ಔಷಧಿ ಉಗ್ರಾಣದಿಂದ ಇಂಜೆಕ್ಷನ್ ತಂದು ಇಂಜೆಕ್ಷನ್ ಹಾಕಲು ಸಿಬ್ಬಂದಿ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕೊಪ್ಪಳ
ಕೊಪ್ಪಳ

By

Published : Jun 3, 2021, 12:17 PM IST

ಕೊಪ್ಪಳ: ಬ್ಲ್ಯಾಕ್​ ಫಂಗಸ್ ಸೋಂಕಿಗೆ ತುತ್ತಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳಿಗೆ ಇಂಜೆಕ್ಷನ್ ಬಂದಿಲ್ಲ ಎಂಬ ಕಾರಣಕ್ಕೆ ಎರಡು ದಿನಗಳಿಂದ ಇಂಜೆಕ್ಷನ್ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

2 ದಿನಗಳಿಂದ ಚುಚ್ಚುಮದ್ದು ನೀಡದ ಆರೋಪ

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳ ಸಂಬಂಧಿಕರು ಈ ಆರೋಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ 14 ಜನರಿಗೆ ಬ್ಲ್ಯಾಕ್​​ ಫಂಗಸ್ ಕಾಣಿಸಿಕೊಂಡಿದೆ. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ‌. 6 ಜನ ಗುಣಮುಖರಾಗಿದ್ದಾರೆ. ಇನ್ನೂ ಆರು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ‌. ಬ್ಲ್ಯಾಕ್​​ ಫಂಗಸ್​ಗೆ ತುತ್ತಾದವರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಬೇಕು. ಅದರಲ್ಲಿ ನಿತ್ಯ 4 ಇಂಜೆಕ್ಷನ್ ಹಾಕಬೇಕು. ಆದರೆ ಕೊಪ್ಪಳ ಜಿಲ್ಲೆಯಲ್ಲಿರುವ ಬ್ಲ್ಯಾಕ್​ ಫಂಗಸ್ ಸೋಂಕಿತರಿಗೆ ಎರಡು ದಿನಗಳಿಂದ ಇಂಜೆಕ್ಷನ್ ಹಾಕಿಲ್ಲ ಎಂದು ರೋಗಿಗಳ ಕುಟುಂಬದವರು ಆರೋಪಿಸಿದ್ದಾರೆ.

ಇನ್ನು ಆಸ್ಪತ್ರೆ ಸಿಬ್ಬಂದಿ ಸಹ ಸದ್ಯ ಇಂಜೆಕ್ಷನ್ ಹಾಕಿಲ್ಲ, ನಾವು ಔಷಧಿ ಸಂಗ್ರಹ ವಿಭಾಗಕ್ಕೆ ಇಂಡೆಂಟ್ ಹಾಕಿದ್ದೇವೆ. ಈಗ ಬರುತ್ತೆ, ಹಾಕುತ್ತೇವೆ ಎಂದು ಸಾಬೂಬು ಹೇಳುತ್ತಿದ್ದಾರೆ. ಈ ನಡುವೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಬ್ಲ್ಯಾಕ್​ ಫಂಗಸ್​ಗೆ ಇಂಜೆಕ್ಷನ್ ಕೊರತೆಯಿಲ್ಲ, ಸಾಕಷ್ಟು ಇಂಜೆಕ್ಷನ್ ಬಂದಿದೆ. ಅವಶ್ಯಕತೆ ಇದ್ದಷ್ಟು ಇಂಜೆಕ್ಷನ್ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್​ನಿಂದ ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಅವಶ್ಯವಿದೆ. ಆದರೆ ಔಷಧಿ ಉಗ್ರಾಣದಿಂದ ಇಂಜೆಕ್ಷನ್ ತಂದು ಇಂಜೆಕ್ಷನ್ ಹಾಕಲು ಸಿಬ್ಬಂದಿ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೋಂಕಿತರ ಸಂಬಂಧಿಕರು ಆಗ್ರಹಿಸಿದ್ದಾರೆ.

ಇನ್ನು ಮಾಧ್ಯಮಗಳು ಮಾಹಿತಿ ಆಧರಿಸಿ ಸುದ್ದಿ ಮಾಡಲು ಬಂದಿದ್ದನ್ನು ಕಂಡು ಎಚ್ಚೆತ್ತುಕೊಂಡ ಸಿಬ್ಬಂದಿ ರಾತ್ರಿ ವೇಳೆ ಇಂಜೆಕ್ಷನ್​ಗಳನ್ನು ತರಿಸಿಕೊಂಡು ಇಂಜೆಕ್ಷನ್ ಹಾಕಿದ್ದಾರೆ‌. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು ಎಂಬುದು ರೋಗಿಗಳ ಸಂಬಂಧಿಕರ ಅಭಿಪ್ರಾಯವಾಗಿದೆ.

ABOUT THE AUTHOR

...view details