ಕರ್ನಾಟಕ

karnataka

ETV Bharat / state

ಕುಷ್ಟಗಿ ಬಳಿ ಅಪಘಾತ: ಐವರಿಗೆ ಗಂಭೀರ ಗಾಯ, 8 ಜನ ಆಸ್ಪತ್ರೆಗೆ ದಾಖಲು - ಕೊಪ್ಪಳ ಸುದ್ದಿ

ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ದೇವರ ದರ್ಶನ ಮುಗಿಸಿ ತಮ್ಮೂರಿಗೆ ವಾಪಸ್​ ಆಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರೊಂದು ಟಂಟಂಗೆ ಡಿಕ್ಕಿ ಹೊಡೆದಿದೆ.

ಕುಷ್ಟಗಿ ಬಳಿ ಅಪಘಾತ

By

Published : Oct 9, 2019, 1:47 PM IST

ಕೊಪ್ಪಳ:ದೇವರ ದರ್ಶನ ಮುಗಿಸಿಕೊಂಡು ಊರಿಗೆ ವಾಪಸ್​​ ಆಗುತ್ತಿದ್ದ ಟಂಟಂ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ 8 ಜನರು ಗಾಯಗೊಂಡಿದ್ದಾರೆ.

ಕುಷ್ಟಗಿ ಬಳಿ ಅಪಘಾತ

ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ‌. ಗಾಯಾಳುಗಳು ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದವರಾಗಿದ್ದಾರೆ. ಇವರು ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದುಕೊಂಡು ತಮ್ಮೂರಿಗೆ ವಾಪಸ್​ ಆಗುತ್ತಿದ್ದರು.

ಕುಷ್ಟಗಿ ಬಳಿ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಟಂಟಂ ನಲ್ಲಿದ್ದ ಅಂಬಮ್ಮ ಹನಮಂತ ಗೋಪಾಳಿ, ಪರಸಪ್ಪ ಶರಣಪ್ಪ ಓಣಿಮನಿ, ಚನ್ನಪ್ಪ ಗೋಪಾಳಿ, ಮಂಜುನಾಥ ಗೋಪಾಳಿ ಸೇರಿದಂತೆ ಎಂಟು ಜನರಿಗೆ ಗಾಯಗಳಾಗಿವೆ.

ಈ ಪೈಕಿ ಐವರಿಗೆ ತೀವ್ರ ಗಾಯವಾಗಿದ್ದು, ಇನ್ನು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ತಹಶೀಲ್ದಾರ್ ಕೆ.ಎಂ.ಗುರು ಬಸವರಾಜ ಅವರು, ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details