ಕರ್ನಾಟಕ

karnataka

ETV Bharat / state

ರಸ್ತೆ ದಾಟುತ್ತಿದ್ದಾಗ ಲಾರಿ ಹರಿದು ಓರ್ವ ಸಾವು - ಕುಷ್ಟಗಿ ಪಟ್ಟಣ

ಕುಷ್ಟಗಿ ಪಟ್ಟಣದ ಅಂಬೇಡ್ಕರ್ ಸರ್ಕಲ್​ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ದಾಟುತ್ತಿದ್ದಾಗ ಲಾರಿ ಹರಿದು ಓರ್ವ ಸ್ಥಳದಲ್ಲಿಯೇ ಅಸುನೀಗಿದ್ದಾನೆ.

ಓರ್ವ ಸಾವು

By

Published : Apr 2, 2019, 12:02 PM IST

ಕೊಪ್ಪಳ: ರಸ್ತೆ ದಾಟುತ್ತಿದ್ದಾಗ ಲಾರಿ ಹರಿದು ಓರ್ವ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದ ಅಂಬೇಡ್ಕರ್​ ಸರ್ಕಲ್​ನಲ್ಲಿ ನಡೆದಿದೆ.‌

ರಸ್ತೆ ದಾಟುತ್ತಿದ್ದಾಗ ಲಾರಿ ಹರಿದು ಓರ್ವ ಸಾವು

ಹಿರೇಮನ್ನಾಪುರ ಗ್ರಾಮದ ನಿವಾಸಿ ಆಂಜನೇಯ (27) ಮೃತ ವ್ಯಕ್ತಿ. ಕುಷ್ಟಗಿ ಪಟ್ಟಣದ ಅಂಬೇಡ್ಕರ್ ಸರ್ಕಲ್​ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ದಾಟುತ್ತಿದ್ದಾಗ ಲಾರಿ ಹರಿದಿದೆ. ಪರಿಣಾಮ ಆಂಜನೇಯ ಸ್ಥಳದಲ್ಲಿಯೇ ಅಸುನೀಗಿದ್ದಾನೆ.

ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details