ಕರ್ನಾಟಕ

karnataka

ETV Bharat / state

ಮನೆದೇವರ ಜಾತ್ರೆಗೆ ಹೊರಟವರ ಕ್ರೂಸರ್​ಗೆ ಬಸ್​ ಡಿಕ್ಕಿ: ಬಾಲಕ ಸಾವು, ಐವರಿಗೆ ಗಾಯ - gangavati Cruiser Accident

ಬೆಂಗಳೂರಿನಿಂದ ಲಿಂಗಸುಗೂರಿನ ಹಟ್ಟಿಗೆ ಹೊರಟಿದ್ದ ಬಸ್​, ಜವಳಗೆರಾದಿಂದ ಹರಿಹರಕ್ಕೆ ಹೊರಟಿದ್ದ ಕ್ರೂಸರ್ ನಡುವೆ ಗಂಗಾವತಿ ಬಳಿ ಅಪಘಾತವಾಗಿದೆ.

accident-between-cruiser-and-bus-near-gangavati
ಮನೆದೇವರ ಜಾತ್ರೆಗೆ ಹೊರಟವರ ಕ್ರೂಸರ್​ಗೆ ಬಸ್​ ಡಿಕ್ಕಿ: ಬಾಲಕ ಸಾವು, ಐವರಿಗೆ ಗಾಯ

By

Published : Sep 8, 2021, 7:18 AM IST

ಗಂಗಾವತಿ:ಮನೆದೇವರ ಜಾತ್ರೆಗೆ ಹೊರಟಿದ್ದವರ ಕ್ರೂಸರ್ ವಾಹನಕ್ಕೆ ಖಾಸಗಿ ಬಸ್​​ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟು, 5ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ತಾಲೂಕಿನ ಜಂಗಮರ ಕಲ್ಗುಡಿ ಬಳಿ ಇಂದು ಬೆಳಗಿನಜಾವ ಸಂಭವಿಸಿದೆ.

ಬೆಂಗಳೂರಿನಿಂದ ಲಿಂಗಸುಗೂರಿನ ಹಟ್ಟಿಗೆ ಹೊರಟಿದ್ದ ಬಸ್​, ಜವಳಗೆರಾದಿಂದ ಹರಿಹರಕ್ಕೆ ಹೊರಟಿದ್ದ ಕ್ರೂಸರ್ ನಡುವೆ ಅಪಘಾತವಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೆರಾದ 9 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಕ್ರೂಸರ್​ನಲ್ಲಿದ್ದ 5ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ 112 ಗಸ್ತು ವಾಹನದ ಮೂಲಕ ಪೊಲೀಸರು ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕ್ರೂಸರ್

ಘಟನೆ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್​​ ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ:ಕಾವೇರಿ ಕೂಗು ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ABOUT THE AUTHOR

...view details