ಕೊಪ್ಪಳ :ಭೂಮಾಪಕ ರುದ್ರೇಶ್ ಎಂಬಾತ ಅರ್ಜಿದಾರರ ಕೆಲಸ ಮಾಡಿಕೊಡಲು 5000 ರೂಪಾಯಿ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ತಾಲೂಕಿನ ಹನುಮನಹಟ್ಟಿ ಗ್ರಾಮದ ಹನುಮಪ್ಪ ಮ್ಯಾದನೇರಿ ಎಂಬುವರು ಜಮೀನಿನ ಪಾಲುವಾಟ್ನಿಗೆ ಅರ್ಜಿ ಹಾಕಿದ್ದಾರೆ. ಸರ್ವೇ ಕಚೇರಿಯ ಭೂಮಾಪಕ ರುದ್ರೇಶ್ ಎಂಬಾತ ಅರ್ಜಿದಾರರ ಕೆಲಸ ಮಾಡಿಕೊಡಲು 20 ರಿಂದ 25 ಸಾವಿರ ರೂಪಾಯಿವರೆಗೂ ಖರ್ಚಾಗುತ್ತದೆ ಎಂದು ಸುಳ್ಳು ಹೇಳಿ ಮುಂಗಡವಾಗಿ 16,000 ರೂ. ಪಡೆದಿದ್ದಾನೆ.