ಕರ್ನಾಟಕ

karnataka

ETV Bharat / state

ಭೂದಾಖಲೆಗಳ ಉಪನಿರ್ದೇಶಕರ ನಿವಾಸದ ಮೇಲೆ ಎಸಿಬಿ ದಾಳಿ - ಗೋಪಾಲಯ್ಯ ಮಾಲಗತ್ತಿ ಭೂದಾಖಲೆಗಳ ಉಪನಿರ್ದೇಶಕ

ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿರುವ ತಾಲೇಡಾ ಲೇ ಔಟ್​ನಲ್ಲಿರುವ ಗೋಪಾಲಯ್ಯ ಮಾಲಗತ್ತಿ ಎಂಬ ಅಧಿಕಾರಿಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Koppal
ಎಸಿಬಿ ಅಧಿಕಾರಿಗಳಿಂದ ದಾಳಿ

By

Published : Jun 16, 2020, 11:10 AM IST

ಕೊಪ್ಪಳ: ನಗರದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ಕಿನ್ನಾಳ ರಸ್ತೆಯಲ್ಲಿರುವ ತಾಲೇಡಾ ಲೇ ಔಟ್​ನಲ್ಲಿರುವ ಗೋಪಾಲಯ್ಯ ಮಾಲಗತ್ತಿ ಎಂಬ ಅಧಿಕಾರಿಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋಪಾಲಯ್ಯ ಮಾಲಗತ್ತಿ ಅವರು ಬಾಗಲಕೋಟೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕರಾಗಿ (DDLR) ಕೆಲಸ ಮಾಡುತ್ತಿದ್ದಾರೆ.

ಭೂದಾಖಲೆಗಳ ಉಪನಿರ್ದೇಶಕರ ಮನೆ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ

ಇನ್ನು ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ABOUT THE AUTHOR

...view details