ಗಂಗಾವತಿ: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಡ್ ನೀಡಲು ಒಪ್ಪಿದ ಖಾಸಗಿ ಆಸ್ಪತ್ರೆಗೆ ಎಸಿ-ಡಿಹೆಚ್ಒ ಭೇಟಿ, ಪರಿಶೀಲನೆ - ಖಾಸಗಿ ಆಸ್ಪತ್ರೆಗೆ ಎಸಿ, ಡಿಎಚ್ಒ ಭೇಟಿ
ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೆಡ್ ನೀಡಲು ಹಿಂದೇಟು ಹಾಕಿದ್ದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ, ಕಾನೂನು ಕ್ರಮಕ್ಕೆ ಮುಂದಾಗಿ ನೋಂದಣಿ ರದ್ದು ಮಾಡಲು ಮುಂದಾಗುತ್ತಿದ್ದಂತೆ ಕೆಲ ಆಸ್ಪತ್ರೆಗಳು ಬೆಡ್ ನೀಡಲು ಮುಂದೆ ಬಂದಿವೆ.

ಬೆಡ್ ನೀಡಲು ಒಪ್ಪಿದ ಖಾಸಗಿ ಆಸ್ಪತ್ರೆಗೆ ಎಸಿ, ಡಿಎಚ್ಒ ಭೇಟಿ: ಪರಿಶೀಲನೆ..
ಬೆಡ್ ನೀಡಲು ಒಪ್ಪಿದ ಖಾಸಗಿ ಆಸ್ಪತ್ರೆಗೆ ಎಸಿ-ಡಿಹೆಚ್ಒ ಭೇಟಿ: ಪರಿಶೀಲನೆ
ಈ ಮೊದಲು ಬೆಡ್ ನೀಡಲು ಹಿಂದೇಟು ಹಾಕಿದ್ದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ, ಕಾನೂನು ಕ್ರಮಕ್ಕೆ ಮುಂದಾಗಿ ನೋಂದಣಿ ರದ್ದು ಮಾಡಲು ಮುಂದಾಗುತ್ತಿದ್ದಂತೆ ಕೆಲ ಆಸ್ಪತ್ರೆಗಳು ಬೆಡ್ ನೀಡಲು ಮುಂದೆ ಬಂದಿವೆ.
ಬೆಡ್ ನೀಡಲು ಸಿದ್ಧವಿರುವ ಆಸ್ಪತ್ರೆಗಳಲ್ಲಿನ ವ್ಯವಸ್ಥೆ, ಗಾಳಿ-ಬೆಳಕು, ವಿದ್ಯುತ್, ಇತರ ರೋಗಿಗಳಿಗೆ ಇರುವ ಅಂತರ ಇತ್ಯಾದಿಗಳ ಪೂರಕ ಅಗತ್ಯತೆಗಳನ್ನು ಸಹಾಯಕ ಆಯುಕ್ತ ಹಾಗೂ ಡಿಹೆಚ್ಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.