ಗಂಗಾವತಿ:ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದಲ್ಲಿನ ಹುಂಡಿ ಎಣಿಕೆ ಕಾರ್ಯ ಬುಧವಾರ ತಹಸೀಲ್ದಾರ್ ಯು., ನಾಗರಾಜ್ ನೇತೃತ್ವದಲ್ಲಿ ನಡೆದಿದ್ದು, ಯುರೋಪ ಒಕ್ಕೂಟ, ಥಾಯ್ಲೆಂಡ್ ಮತ್ತು ನೇಪಾಳದ ನಾಣ್ಯಗಳು ಪತ್ತೆಯಾಗಿವೆ. ಯರೋಪಿನ ಒಂದು ಮತ್ತು ಎರಡು ಯುರೋ, ಥಾಯ್ಲೆಂಡ್ ಒಂದು ನಾಣ್ಯ ಮತ್ತು ನೇಪಾಳ ದೇಶಕ್ಕೆ ಸೇರಿದ ಐದು, ಐವ್ವತ್ತು ಮತ್ತು ನೂರು ರೂಪಾಯಿ ಮೊತ್ತದ ನೋಟುಗಳು ಹನುಮನ ಹುಂಡಿಯಲ್ಲಿ ಪತ್ತೆಯಾಗಿವೆ.
ಅಂಜನಾದ್ರಿಯ ಹನುಮನ ಹುಂಡಿಯಲ್ಲಿ ಯುರೋಪ್, ಥಾಯ್ಲೆಂಡ್ - ನೇಪಾಳದ ಕರೆನ್ಸಿ ಪತ್ತೆ! - ಅಂಜನಾದ್ರಿಯ ಹನುಮಾನ ದೇವಸ್ಥಾನ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದ ವೇಳೆ ವಿದೇಶಿ ನಾಣ್ಯಗಳು ಪತ್ತೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ವಿದೇಶಿ ನಾಣ್ಯಗಳು
ಓದಿ:ತಕ್ಷಣ ಪಾನ್ಗೆ ಆಧಾರ್ ಲಿಂಕ್ ಮಾಡಿ, ನಾಳೆಯೇ ಕೊನೆಯ ದಿನ: ಹೀಗಿದೆ ವಿಧಾನ..
ಕಳೆದ ಒಂದು ವರ್ಷದ ಅವಧಿಯಲ್ಲಿ ಅಂಜನಾದ್ರಿಯ ಹನುಮಂತ ದೇವರ ಕಾಣಿಕೆಯ ಪೆಟ್ಟಿಗೆಯಲ್ಲಿ ಸುಮಾರು 50ಕ್ಕೂ ಹೆಚ್ಚು ನಾನಾ ದೇಶಗಳ ನಾಣ್ಯ ಮತ್ತು ನೋಟುಗಳು ಪತ್ತೆಯಾಗಿವೆ. ಮಾರ್ಚ್ ತಿಂಗಳಲ್ಲಿ ಒಟ್ಟು 9.29 ಲಕ್ಷ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಕಳೆದ ತಿಂಗಳು 9.92 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು.