ಕರ್ನಾಟಕ

karnataka

ETV Bharat / state

ಆನೆಗುಂದಿ ಉತ್ಸವ ಹಿನ್ನೆಲೆ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ - ಗಂಗಾವತಿಯ ಆನೆಗುಂದಿ

ಜನವರಿ 9 ಮತ್ತು 10ರಂದು ನಡೆಯಲಿರುವ ಆನೆಗುಂದಿ ಉತ್ಸವ ಹಿನ್ನೆಲೆ, ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಆನೆಗುಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ

By

Published : Nov 23, 2019, 7:18 PM IST

ಕೊಪ್ಪಳ:ಐತಿಹಾಸಿಕ‌‌ ಆನೆಗುಂದಿ ಉತ್ಸವ ಆಚರಣೆ ಹಿನ್ನೆಲೆ, ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರು ಜಿಲ್ಲೆಯ ಗಂಗಾವತಿಯ ಆನೆಗುಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಜನವರಿ 9 ಮತ್ತು 10, ಎರಡು ದಿನಗಳ ಕಾಲ ಐತಿಹಾಸಿಕ ಆನೆಗುಂದಿ ಉತ್ಸವ ನಡೆಸಲು ನಿರ್ಧರಿಸಲಾಗಿದ್ದು, ಆನೆಗುಂದಿ ಉತ್ಸವಕ್ಕೆಂದು ವೇದಿಕೆ, ವಾಹನಗಳ ಪಾರ್ಕಿಂಗ್, ಊಟದ ವ್ಯವಸ್ಥೆಯನ್ನು ಯಾವ್ಯಾವ ಸ್ಥಳದಲ್ಲಿ ಮಾಡಬೇಕು ಎಂಬುದರ ಬಗ್ಗೆ ಪರಿಶೀಲಿಸಲನೆ ನಡೆಸಲಾಗಿದೆ ಎಂದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ

ಉತ್ಸವದ ಸಿದ್ಧತೆ ಕುರಿತಂತೆ ಆನೆಗುಂದಿಯಲ್ಲಿ ಇನ್ನು ಎರಡರಿಂದ ಮೂರು ಸಭೆ ನಡೆಸಿ ಅಂತಿಮ ರೂಪುರೇಷೆ, ಸಿದ್ಧತೆಗಳ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರು ಇದೇ ಸಂದರ್ಭದಲ್ಲಿ‌ ಮಾಹಿತಿ‌ ನೀಡಿದರು.

ABOUT THE AUTHOR

...view details