ಕೊಪ್ಪಳ:ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಹಗರಿಬೊಮ್ಮಹಳ್ಳಿ ಶಾಸಕ ಭೀಮಾನಾಯ್ಕ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ರಾ.ಬ.ಕೊ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎನ್.ಸತ್ಯನಾರಾಯಣ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ರಾ.ಬ.ಕೊ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎನ್.ಸತ್ಯನಾರಾಯಣ ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಎಫ್ ಅಧ್ಯಕ್ಷ ಸ್ಥಾನ ಈವರೆಗೆ ಉತ್ತರ ಕರ್ನಾಟಕ ಭಾಗಕ್ಕೆ ಕೇವಲ ಒಂದು ಬಾರಿ ಮಾತ್ರ ಸಿಕ್ಕಿದೆ. ಸೋಮಶೇಖರ್ ರೆಡ್ಡಿ ಅವರು ಅಧ್ಯಕ್ಷರಾಗಿದ್ದನ್ನು ಬಿಟ್ಟರೆ ಈ ಭಾಗದವರು ಮತ್ಯಾರು ಅಧ್ಯಕ್ಷರಾಗಿಲ್ಲ ಎಂದರು.
ಇನ್ನು 2016 ರಲ್ಲಿ ಎರಡನೇ ಅವಧಿಗೆ ಎಂಪಿ ರವೀಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಸಿಗಬೇಕಾಗಿತ್ತು, ಆದರೆ ಸಿಗಲಿಲ್ಲ. ಈಗ 14 ಒಕ್ಕೂಟಗಳಲ್ಲಿ 9 ಜನ ಕಾಂಗ್ರೆಸ್ ಪಕ್ಷದವರಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇನ್ನೇನು ಘೋಷಣೆಯಾಗಲಿದೆ. ಈವರೆಗೆ ನಡೆದ ಅಧ್ಯಕ್ಷರ ಆಯ್ಕೆ ನೋಡಿದರೆ ಚುನಾವಣೆ ಈ ಬಾರಿಯೂ ನಡೆಯುವುದಿಲ್ಲ ಎನಿಸುತ್ತದೆ ಎಂದಿದ್ದಾರೆ.
ಆಡಳಿತ ಪಕ್ಷದ ಮುಖಂಡರು ಮಾಡುವ ತೀರ್ಮಾನದಿಂದ ಕೆಎಂಎಫ್ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಹೀಗಾಗಿ ಈ ಭಾಗಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಭೀಮಾ ನಾಯಕ್ ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಬೇಕು. ಯಾಕೆಂದರೆ ಅಪಾರ ಆಸಕ್ತಿ ಹೊಂದಿರುವ ಭೀಮನಾಯಕ ಅವರು ಕೆಎಂಎಫ್ ಅಭಿವೃದ್ಧಿ ಮಾಡುತ್ತಾರೆ. ಜೊತೆಗೆ ಈ ಭಾಗಕ್ಕೂ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ಭೀಮಾ ನಾಯಕ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಎನ್ ಸತ್ಯನಾರಾಯಣ ಅವರು ಆಗ್ರಹಿಸಿದ್ದಾರೆ. ಇದೇ ವೇಳೆ, ಚಿಕ್ಕಮನ್ನಾಪುರದ ಹಾಲು ಉತ್ಪಾದಕರ ಸಹಕಾರ ಸಂಘ ನಿಗಮದ ಅಧ್ಯಕ್ಷ ನಾಗರಾಜ, ನಿಡಶೇಸಿ ಸಂಘದ ಮಂಜುನಾಥ ಕೆ.ಬಿ., ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.