ಗಂಗಾವತಿ (ಕೊಪ್ಪಳ):ಬಾಲಕಿಯೊಬ್ಬಳನ್ನು ಯುವಕ ಅಪಹರಿಸಿ ಆಕೆಯ ವಿರೋಧದ ನಡುವೆಯೂ ಮದುವೆಯಾಗಿದ್ದಾನೆ. ಅಲ್ಲದೆ, ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಡಿನಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 14 ವರ್ಷದ ಬಾಲಕಿಯನ್ನು ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಯುವಕ ಸುರೇಶ್ ತಿಮ್ಮಾರೆಡ್ಡಿ ಕುರುಬರ್ ಎಂಬಾತ ಅಪಹರಿಸಿದ್ದ. ಬಳಿಕ ಆಕೆಯ ವಿರೋಧದ ನಡುವೆಯೂ ಹೊಸೂರು ಗ್ರಾಮದ ಮಾಗಣಿ ಈಶ್ವರ ದೇವಸ್ಥಾನಕ್ಕೆ ಕರೊದೊಯ್ದು ಮದುವೆಯಾಗಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಸುರೇಶನು ಆಕೆಯ ಮೇಲೆ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದಿದ್ದಾನೆ.