ಗಂಗಾವತಿ:ವಿದ್ಯುತ್ ಶಾಕ್‌ಗೆ ಒಳಗಾಗಿದ್ದ ಬಾಲಕನೊಬ್ಬ ಇನ್ನೇನು ಮೃತಪಟ್ಟ ಎನ್ನುವಷ್ಟರಲ್ಲಿ ಅದೃಷ್ಟವಶಾತ್ ಕರೆಂಟ್ ಸ್ಥಗಿತವಾಗಿ ಬದುಕುಳಿದ ಘಟನೆ ನಗರದ ಎಚ್ಆರ್‌ಎಸ್ ಕಾಲೋನಿಯಲ್ಲಿ ನಡೆದಿದೆ.
ವಿದ್ಯುತ್ ಶಾಕ್‌ಗೆ ಬಲಿಯಾಗುತ್ತಿದ್ದ ಬಾಲಕ ಪ್ರಾಣಾಪಾಯದಿಂದ ಪಾರು.. - ಟ್ರಾನ್ಸ್ಫಾರ್ಮರ್
ವಿದ್ಯುತ್ ಶಾಕ್‌ಗೆ ಒಳಗಾಗಿದ್ದ ಬಾಲಕನೊಬ್ಬ ಇನ್ನೇನು ಮೃತಪಟ್ಟ ಎನ್ನುವಷ್ಟರಲ್ಲಿ ಅದೃಷ್ಟವಶಾತ್ ಕರೆಂಟ್ ಸ್ಥಗಿತವಾಗಿ ಬದುಕುಳಿದ ಘಟನೆ ನಗರದ ಎಚ್ಆರ್‌ಎಸ್ ಕಾಲೋನಿಯಲ್ಲಿ ನಡೆದಿದೆ.
ವಿದ್ಯುತ್ ಶಾಕ್ ಗೆ ಬಲಿಯಾಗುತ್ತಿದ್ದ ಬಾಲಕ ಪ್ರಾಣಾಪಾಯದಿಂದ ಪಾರು
ಇದೀಗ ಸುಟ್ಟಗಾಯಗಳಿಂದ ಬದುಕುಳಿದ ಬಾಲಕ ಉಮೇಶ (9)ನನ್ನ ಇಲ್ಲಿನ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಿಂದಾಗಿ ಬಾಲಕನ ಎಡಗೈ ಸಂಪೂರ್ಣ ಸುಟ್ಟು ಹೋಗಿದೆ.ಆಟವಾಡಿಕೊಂಡಿದ್ದ ಬಾಲಕ ಆಕಸ್ಮಿಕ ಮನೆ ಸಮೀಪ ಇರುವ ಟ್ರಾನ್ಸ್‌ಫಾರ್ಮರ್ ಬಳಿಗೆ ತೆರಳಿದ್ದಾನೆ. ಆಗ ವಿದ್ಯುತ್ ಪ್ರವಾಹ ಬಾಲಕನ್ನು ಸೆಳೆದುಕೊಂಡು ಈ ಘಟನೆ ನಡೆದಿದೆ. ಟ್ರಾನ್ಶ್‌ಫಾರ್ಮರಿಗೆ ರಕ್ಷಣಾ ಕವಚ ಇಲ್ಲದ್ದರಿಂದ ಈ ಘಟನೆ ನಡೆದಿದೆ ಎಂದು ಪಾಲಕರು ದೂರಿದ್ದಾರೆ.