ಕೊಪ್ಪಳ: ಕೋವಿಡ್ ಸೋಂಕಿಗೊಳಗಾಗಿ ಸುದೀರ್ಘ 158 ದಿನಗಳ ಚಿಕಿತ್ಸೆಯ ಬಳಿಕ ಗುಣಮುಖರಾಗಿ ಮಹಿಳೆಯೊಬ್ಬರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾದರು.
104 ದಿನ ವೆಂಟಿಲೇಟರ್‌ನಲ್ಲಿದ್ದು 158 ದಿನಗಳ ಚಿಕಿತ್ಸೆ ಬಳಿಕ ಕೋವಿಡ್‌ನಿಂದ ಮಹಿಳೆ ಗುಣಮುಖ - ಕೊಪ್ಪಳದಲ್ಲಿ ಕೊರೊನಾ ಸೋಂಕಿತೆ ಗುಣಮುಖ
ಮಹಿಳೆಯೊಬ್ಬರು ಕೊನೆಗೂ ಕೋವಿಡ್‌ಗೆ ಸೆಡ್ಡು ಹೊಡೆದಿದ್ದಾರೆ. ಬರೋಬ್ಬರಿ 158 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಬರೋಬ್ಬರಿ 158 ದಿನಗಳ ನಂತರ ಕೊರೊನಾದಿಂದ ಗುಣಮುಖವಾದ ಮಹಿಳೆ
ಯಲಬುರ್ಗಾ ತಾಲೂಕಿನ ಬೋದೂರಿನ 45 ವರ್ಷದ ಈ ಮಹಿಳೆ ಕೋವಿಡ್ ಸೋಂಕು ತಗುಲಿ ಜುಲೈ 13 ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. 104 ದಿನ ವೆಂಟಿಲೇಟರ್ನಲ್ಲಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಶೇ90ರಷ್ಟು ಶ್ವಾಸಕೋಶಕ್ಕೆ ಹಾನಿಯಾಗಿತ್ತಂತೆ. ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
Last Updated : Dec 7, 2021, 6:34 PM IST