ಕುಷ್ಟಗಿ(ಕೊಪ್ಪಳ): ತಾಲೂಕಿನ ಜಾಲಾಪುರ ಗ್ರಾಮದಲ್ಲಿ ಹಾವು ಕಚ್ಚಿದ ಪರಿಣಾಮ ರೈತ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ನಡೆದಿದೆ.
ರತ್ನಮ್ಮ ದೇವಪ್ಪ ಬೊಮ್ಮನಾಳ ಹಾವು ಕಚ್ಚಿ ಮೃತಪಟ್ಟಿರುವ ದುರ್ದೈವಿ. ಜಾಲಾಪುರ ಗ್ರಾಮದ ತಮ್ಮ ಜಮೀನಿನಲ್ಲಿ ಗುಡಿಸಲಿನಲ್ಲಿ ನಾಲ್ವರು ಮಕ್ಕಳೊಂದಿಗೆ ವಾಸವಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಮಂಗಳವಾರ ರಾತ್ರಿ ಮಲಗಿದ್ದ ವೇಳೆ ಹಾವು ಮಹಿಳೆಯ ಹಿಮ್ಮಡಿ ಭಾಗಕ್ಕೆ ಕಚ್ಚಿದೆ.