ಕರ್ನಾಟಕ

karnataka

ಆಂಜನೇಯನ ಮೇಲೂ ಕೊರೊನಾದ ಕರಿನೆರಳು; ಮಾರುತಿ ಮಂದಿರಗಳಲ್ಲಿ ಸಾಂಕೇತಿಕ ಪೂಜೆ

By

Published : Apr 8, 2020, 1:39 PM IST

ಹನುಮ ಜಯಂತಿ ಅಂಗವಾಗಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಅಂಜನೇಯದ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. ಆದರೆ, ಮಿಕ್ಕ ಬಹುತೇಕ ಆಂಜನೇಯನ ದೇಗುಲಗಳಲ್ಲಿ ಯಾವುದೇ ಪೂಜಾ ಕೈಂಕರ್ಯಗಳು ನೆರವೇರಲಿಲ್ಲ.

ಅಂಜನಾದ್ರಿ ಬೆಟ್ಟದಲ್ಲಿ ಅಂಜನೇಯನಿಗೆ ವಿಶೇಷ ಅಲಂಕಾರ
ಅಂಜನಾದ್ರಿ ಬೆಟ್ಟದಲ್ಲಿ ಅಂಜನೇಯನಿಗೆ ವಿಶೇಷ ಅಲಂಕಾರ

ಗಂಗಾವತಿ: ಹನುಮ ಜಯಂತಿ ಅಂಗವಾಗಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಅಂಜನೇಯ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಅಂಜನಾದ್ರಿ ಬೆಟ್ಟದಲ್ಲಿ ಅಂಜನೇಯನಿಗೆ ವಿಶೇಷ ಅಲಂಕಾರ

ಕೊರೊನಾ ಪರಿಣಾಮದಿಂದ ಕಳೆದೆರಡು ವಾರದಿಂದ ಇಡೀ ದೇಶವೇ ಲಾಕ್​​ಡೌನ್​​ ಆಗಿದೆ. ಹಾಗಾಗಿ, ಬಹುತೇಕ ಎಲ್ಲಾ ಹಬ್ಬ ಹರಿದಿನಗಳ ಮೇಲೆ ಅಗಾಧ ಪರಿಣಾಮವಾಗಿದೆ. ಹನುಮ ಜಯಂತಿಯ ಮೇಲೂ ಕೊರೊನಾದ ಕರಿನೆರಳು ಬಿದ್ದಿದೆ.

ಹನುಮ ದೇಗುಲಗಳಲ್ಲಿ ಇಂದು ಕೇವಲ ಸಾಂಕೇತಿಕ ಪೂಜೆ ಬಿಟ್ಟರೆ ಬೇರೆ ಯಾವ ವಿಶೇಷ ಚಟುವಟಿಕೆಯೂ ನಡೆಯಲಿಲ್ಲ. ಬಹುತೇಕ ದೇಗುಲಗಳ ಬಾಗಿಲು ಬಂದ್ ಆಗಿತ್ತು. ಮುಖ್ಯವಾಗಿ ಕೋಟೆ ಆಂಜನೇಯ ದೇಗುಲ, ಜಯನಗರದ ಸತ್ಯಾಂಜನೇಯ, ಯಜ್ಞವಲ್ಕ್ಯ ದೇಗುಲದಲ್ಲಿನ ಆಂಜನೇಯನ ಸೇರಿದಂತೆ ಅನೇಕ ಮಾರುತಿ ಮಂದಿರಗಳಲ್ಲಿ ಅರ್ಚಕರು ಸಾಂಕೇತಿಕ ಪೂಜೆ ಸಲ್ಲಿಸಿದರು.

ABOUT THE AUTHOR

...view details