ಗಂಗಾವತಿ (ಕೊಪ್ಪಳ):ಸಾವು ಯಾರಿಗೆ ಹೇಗೆ, ಯಾವಾಗ ಬರುತ್ತದೆಯೋ ಯಾರಿಗೂ ಗೊತ್ತಿರೋದಿಲ್ಲ. ಇದಕ್ಕೆ ಸಾಕ್ಷಿಯಾಗಿದ್ದು ಮಾತ್ರ ಗಂಗಾವತಿ ಬಿಜೆಪಿ ಮುಖಂಡ.
ಕೊರೊನಾ ತಗುಲಿ ಅಗಲಿದ ಬಿಜೆಪಿ ಮುಖಂಡ ಕಾಮದೊಡ್ಡಿ ದೇವಪ್ಪರ ಸಾವು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಇದರ ನಡುವೆಯೇ ದೇವಪ್ಪ ಕಳೆದ ಕೆಲ ತಿಂಗಳ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ ಹಾಡಿದ್ದ ‘ಒಳಿತು ಮಾಡು ಮನುಸಾ, ನೀನ್ ಇರೋದು ಮೂರು ದಿವಸ’ ಎಂಬ ಹಾಡು ಈಗ ವೈರಲ್ ಆಗುತ್ತಿದೆ.