ಗಂಗಾವತಿ: ಈತ ಕಡು ಬಡವ, ಸಣ್ಣದೊಂದು ಜೋಪಡಿ ಹಾಕಿಕೊಂಡು ನಿತ್ಯ ಹೋಟೆಲ್ ನಡೆಸಿಕೊಂಡು ಅಲ್ಲಿಗೆ ಬರುವ ಗ್ರಾಹಕರಿಗೆ ಬಿಸಿಬಿಸಿ ತಿಂಡಿಕೊಟ್ಟು, ಅದರಿಂದ ಬರುವ ಆದಾಯದಿಂದಲೇ ನಿತ್ಯ ಸಂಸಾರ ದೂಡುತ್ತಿದ್ದ. ಆದರೆ, ಕಳೆದ ಒಂದು ತಿಂಗಳಿಂದ ಕೊರೊನಾದ ವಿರುದ್ಧ ಹೋರಾಟ ಮಾಡಲು ಮುಂದಾಗಿರುವ ಸೇನಾನಿಗಳಿಗೆ ನಿತ್ಯ ಎರಡು ಹೊತ್ತು ಬಿಸಿಬಿಸಿ ಚಹಾ ನೀಡಿ ಅವರನ್ನು ರಿಪ್ರೆಶ್ ಮಾಡುತ್ತಿದ್ದಾನೆ.
ಕೊರೊನಾ ವೀರರನ್ನು ರಿಪ್ರೆಶ್ ಮಾಡುವ ಕಡುಬಡವ... ಸಾಲ ಮಾಡಿ ಸೇನಾನಿಗಳ ಸೇವೆ! - gangavti news
ನಮ್ಮನ್ನು ಕಾಯಲು ಪೊಲೀಸರು, ರಕ್ಷಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಪಡುತ್ತಿರುವ ಕಷ್ಟವನ್ನು ಗಮನಿಸಿ ತಾನು ಏನಾದರೂ ಸೇವೆ ಸಲ್ಲಿಸಬೇಕು ಎಂದುಕೊಂಡ ಸತ್ಯನಾರಾಯಣ ಎಂಬುವರು ಸ್ನೇಹಿತರ ಬಳಿ ಸಾಲ ಮಾಡಿ ಚಹಾ ಮಾಡಿಕೊಂಡು ಬಂದು ಸಿಬ್ಬಂದಿಗೆ ನೀಡುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ.
ಇವರ ಹೆಸರು ಸತ್ಯನಾರಾಯಣ. ವಿದ್ಯಾನಗರ ಎಂಬ ಸಣ್ಣ ಗ್ರಾಮದಲ್ಲಿ ಪುಟ್ಟದೊಂದು ಜೋಪಡಿಯಲ್ಲಿ ಹೊಟೇಲ್ ಮಾಡಿಕೊಂಡಿದ್ದಾರೆ. ಕೊರೊನಾದ ಹೊಡೆತದಿಂದ ಒಂದು ತಿಂಗಳಿಂದ ಹೋಟೆಲ್ ಬಂದ್ ಮಾಡಿದ್ದಾರೆ. ಇಡೀ ದೇಶ ಲಾಕ್ಡೌನ್ ಆಗಿ ಎಲ್ಲರೂ ಮನೆಯಲ್ಲಿದ್ದಾರೆ. ನಮ್ಮನ್ನು ಕಾಯಲು ಪೊಲೀಸರು, ರಕ್ಷಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಪಡುತ್ತಿರುವ ಕಷ್ಟವನ್ನು ಗಮನಿಸಿ ತಾನು ಏನಾದರೂ ಸೇವೆ ಸಲ್ಲಿಸಬೇಕು ಎಂದುಕೊಂಡ ಸತ್ಯನಾರಾಯಣ ಸ್ನೇಹಿತರ ಬಳಿ ಸಾಲ ಮಾಡಿ ಚಹಾ ಮಾಡಿಕೊಂಡು ಬಂದು ಸಿಬ್ಬಂದಿಗೆ ನೀಡುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ.
ಅಂತಯೇ ಅದೆಷ್ಟೊ ಜನರು ಈ ರೀತಿಯ ಸೇವೆಯನ್ನು ತೆರೆಮರೆಯಲ್ಲಿ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಕೊರೊನಾ ವೀರರ ಮೇಲೆ ಎರಗಿ ಬೀಳುವ ಪ್ರಸಂಗವು ನಮ್ಮ ಕಣ್ಣಮುಂದಿರುವುದು ದುರಂತವೇ ಸರಿ.