ಕರ್ನಾಟಕ

karnataka

ETV Bharat / state

ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶಿಕ್ಷಕ.. ಬದುಕು ಕಟ್ಟಿಕೊಳ್ಳಲು ತರಕಾರಿ ಮಾರಾಟ - Gangavathi News

ಕಳೆದ 10 ವರ್ಷಗಳಿಂದ ಸೇಂಟ್ ಫಾಲ್ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರಿಗೆ, ಕೊರೊನಾ ಕಾರಣದಿಂದ ಆಡಳಿತ ಮಂಡಳಿ ವೇತನ ನೀಡಿಲ್ಲ. ಹೀಗಾಗಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ..

A physical teacher  sells vegetables  In Gangavati
ಕೋವಿಡ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶಿಕ್ಷಕ: ಬದುಕು ಕಟ್ಟಿಕೊಳ್ಳಲು ತರಕಾರಿ ಮಾರಾಟ

By

Published : Sep 7, 2020, 7:31 PM IST

ಗಂಗಾವತಿ :ಕೊರೊನಾ ಅನೇಕ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯದಲ್ಲಿ ಶಾಲೆಗಳು ಆರಂಭಗೊಳ್ಳದ ಕಾರಣ ಖಾಸಗಿ ಶಾಲೆಯ ಶಿಕ್ಷಕರ ಬದುಕು ಈಗ ಮೂರಾಬಟ್ಟೆಯಾಗಿದೆ.

ಬದುಕು ಕಟ್ಟಿಕೊಳ್ಳಲು ತರಕಾರಿ ಮಾರಾಟ ಮಾಡ್ತಿರುವ ಶಿಕ್ಷಕ

ಗಂಗಾವತಿಯ ಸೇಂಟ್ ಫಾಲ್ ಪ್ರೌಢಶಾಲೆಯ ದೈಹಿಕ ಶಿಕ್ಷಕರಾಗಿದ್ದ ವಿಜಯಕುಮಾರ್,​ ಬದುಕು ಕಟ್ಟಿಕೊಳ್ಳಲು ತಳ್ಳುಬಂಡಿಯಲ್ಲಿ ತರಕಾರಿಗಳನ್ನು ಮನೆ-ಮನೆಗೆ ಒಯ್ದು ಮಾರಾಟ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಸೇಂಟ್ ಫಾಲ್ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರಿಗೆ, ಕೊರೊನಾ ಕಾರಣದಿಂದ ಆಡಳಿತ ಮಂಡಳಿ ವೇತನ ನೀಡಿಲ್ಲ. ಹೀಗಾಗಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಶಿಕ್ಷಕ ವಿಜಯಕುಮಾರ್, ತನ್ನ ಸಹೋದ್ಯೋಗಿ ಶಿಕ್ಷಕರು, ಶಾಲಾ ಮಕ್ಕಳು, ಪಾಲಕರು ಅಭಿಮಾನದಿಂದ ನನ್ನ ಬಳಿ ತರಕಾರಿ ಖರೀದಿಸುವ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ. ಇದು ನನ್ನ ಜೀವನ ನಿರ್ವಹಣೆಗೆ ನೆರವಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

ABOUT THE AUTHOR

...view details