ಗಂಗಾವತಿ (ಕೊಪ್ಪಳ) :ಹೆಚ್ಐವಿ ಸೋಂಕನ್ನು ಗುಣಪಡಿಸುವ ಮದ್ದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಣ ಕೊಟ್ಟರೆ ಮದ್ದು ತಂದು ಕೊಡುವುದಾಗಿ ಸೋಂಕಿತ ಕೆಲ ರೋಗಿಗಳಿಂದ ವ್ಯಕ್ತಿಯೊಬ್ಬ ಹಣ ವಸೂಲಿ ಮಾಡುತ್ತಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಐವಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಕೆಲವರ ಮಾಹಿತಿ ಹೇಗೋ ಪಡೆದುಕೊಂಡಿರುವ ಈ ವ್ಯಕ್ತಿ, ನಗರದ ನಾನಾ ವಾರ್ಡ್ನ ಸೋಂಕಿತರನ್ನು ಸಂಪರ್ಕಿಸಿ ಒಬ್ಬೊಬ್ಬರಿಂದ ಮೂರರಿಂದ ಹನ್ನೆರಡು ಸಾವಿರಕ್ಕೂ ಅಧಿಕ ಮೊತ್ತದ ಹಣ ಪೀಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದು ಗೌಪ್ಯ ರೋಗ ಇರುವ ವ್ಯಕ್ತಿಯೊಬ್ಬರಿಂದ ಚಿಕಿತ್ಸೆ ಕೊಡಿಸುವುದಾಗಿ ಒಂದೂವರೆ ಲಕ್ಷ ಮೊತ್ತದ ಹಣ ಲಪಟಾಯಿಸಿದ್ದಾನೆ ಎಂದು ತಿಳಿದುಬಂದಿದೆ.