ಕೊಪ್ಪಳ:ಕೊರೊನಾ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಲಾಕ್ಡೌನ್ ನಿಯಮಗಳನ್ನು ಪಾಲಿಸದೇ ಓಡಾಡಿದರೆ ದಂಡ ವಿಧಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
ಲಾಕ್ಡೌನ್ ನಿಯಮ ಗಾಳಿಗೆ ತೂರಿದ್ರೆ ಹುಷಾರ್...ಕೊಪ್ಪಳದಲ್ಲಿ ಸರಿಯಾಗೇ ಬೀಳುತ್ತೆ ದಂಡ - ಎಲ್ಲೆಂದರಲ್ಲಿ ಉಗುಳಿದರೆ 500 ರೂ. ದಂಡ
ಡಿಸಿ ಆದೇಶದ ಹಿನ್ನೆಲೆ ಕೊಪ್ಪಳದಲ್ಲಿ ಮಾಸ್ಕ್ ಧರಿಸದೇ ಓಡಾಡಿದರೆ 200 ರೂ ಹಾಗೂ ಎಲ್ಲೆಂದರಲ್ಲಿ ಉಗುಳಿದರೆ 500 ರೂ. ದಂಡ ಹಾಕಲಾಗುತ್ತಿದೆ.
ಕೊಪ್ಪಳದಲ್ಲಿ ಸರಿಯಾಗೇ ಬೀಳುತ್ತೆ ದಂಡ!
ಡಿ ಸಿ ಆದೇಶದ ಹಿನ್ನೆಲೆ ನಗರದಲ್ಲಿ ನಗರಸಭೆ ಸಿಬ್ಬಂದಿ ದಂಡ ವಸೂಲಿ ಮಾಡುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ನಿಂತಿದ್ದಾರೆ. ಮಾಸ್ಕ್ ಧರಿಸದೇ ಓಡಾಡುವ ಸಾರ್ವಜನಿಕರನ್ನು ತಡೆದು ದಂಡ ಹಾಕ್ತಿದ್ದಾರೆ.
ಮಾಸ್ಕ್ ಧರಿಸದೇ ಓಡಾಡಿದರೆ 200 ರೂಪಾಯಿ ಹಾಗೂ ಎಲ್ಲೆಂದರಲ್ಲಿ ಉಗುಳಿದರೆ 500 ರೂ. ದಂಡ ಹಾಕಲಾಗುತ್ತಿದೆ. ಆದ್ರೆ ಕೆಲ ಸವಾರರು ಇವರನ್ನು ನೋಡಿಯೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದಾರೆ.