ಕರ್ನಾಟಕ

karnataka

ETV Bharat / state

ಮೇಗೂರು ಗ್ರಾಮಕ್ಕೆ ಬಂತು ಹೊಸ ವಿದ್ಯುತ್ ಕಂಬ... ಈಟಿವಿ ಭಾರತ ಫಲಶೃತಿ - ಶಿಥಿಲಗೊಂಡ ವಿದ್ಯುತ್​ ಕಂಬ

ಈಟಿವಿ ಭಾರತದಲ್ಲಿ ''ಶಿಥಿಲಗೊಂಡ ವಿದ್ಯುತ್​ ಕಂಬ ಸರಿ ಮಾಡದ ಜೆಸ್ಕಾಂ; ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ ಗ್ರಾ.ಪಂ. ಅದ್ಯಕ್ಷೆ'' ಎಂಬ ಶೀರ್ಷಿಕೆಯಡಿ ವರದಿ ಪ್ರಸಾರವಾದ ಹಿನ್ನಲೆ ಮೇಗೂರು ಗ್ರಾಮದಲ್ಲಿ ಹೊಸ ವಿದ್ಯುತ್ ಕಂಬ ಅಳವಡಿಸಲಾಗಿದೆ.

A new electrical pole to Megur village of koppala
ಮೇಗೂರು ಗ್ರಾಮಕ್ಕೆ ಬಂತು ಹೊಸ ವಿದ್ಯುತ್ ಕಂಬ...ಈಟಿವಿ ಭಾರತ ಫಲಶೃತಿ

By

Published : May 28, 2020, 7:23 PM IST

Updated : May 28, 2020, 7:57 PM IST

ಕುಷ್ಟಗಿ(ಕೊಪ್ಪಳ): ತಾಲೂಕಿನ ಶಿರಗುಪ್ಪಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮೇಗೂರು ಗ್ರಾಮದಲ್ಲಿ ಜೆಸ್ಕಾಂ ಇಲಾಖೆಯು ಮುರಿದ ವಿದ್ಯುತ್ ಕಂಬ ತೆರವುಗೊಳಿಸಿ ಹೊಸ ವಿದ್ಯುತ್ ಕಂಬ ಅಳವಡಿಸಿದೆ.

ಶಿಥಿಲಗೊಂಡ ವಿದ್ಯುತ್ ಕಂಬ ಸರಿಮಾಡದ ಜೆಸ್ಕಾಂ: ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಗ್ರಾಪಂ ಅಧ್ಯಕ್ಷೆ

ಈಟಿವಿ ಭಾರತದಲ್ಲಿ ''ಶಿಥಿಲಗೊಂಡ ವಿದ್ಯುತ್​ ಕಂಬ ಸರಿ ಮಾಡದ ಜೆಸ್ಕಾಂ; ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ ಗ್ರಾ.ಪಂ. ಅದ್ಯಕ್ಷೆ'' ಎಂಬ ಶೀರ್ಷಿಕೆಯಡಿ ವರದಿ ಬಿತ್ತರಿಸಲಾಗಿತ್ತು. ಈ ಹಿನ್ನೆಲೆ ಜೆಸ್ಕಾಂ ಎಇಇ ಮಂಜುನಾಥ ಅವರು ಗುರುವಾರ ಮೇಗೂರು ಗ್ರಾಮಕ್ಕೆ ಜೆಸ್ಕಾಂ ಸಿಬ್ಬಂದಿ ಕಳುಹಿಸಿದ್ದರು. ಮುರಿದು ಬಾಗಿದ್ದ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬ ತೆರವುಗೊಳಿಸಿದ ಸಿಬ್ಬಂದಿ ಹೊಸ ವಿದ್ಯುತ್ ಕಂಬವನ್ನು ಅಳವಡಿಸಿದ್ದಾರೆ.

ಈಟಿವಿ ಭಾರತ ವರದಿ ನೋಡಿ, ಜನರ ಸಂಕಷ್ಟಕ್ಕೆ ಸ್ಪಂದಿಸಿರುವ ಜೆಸ್ಕಾಂ ಇಲಾಖೆಗೆ ಧನ್ಯವಾದ ತಿಳಿಸುತ್ತೇವೆ.

Last Updated : May 28, 2020, 7:57 PM IST

ABOUT THE AUTHOR

...view details