ಕರ್ನಾಟಕ

karnataka

ETV Bharat / state

ನಕಲಿ ಸೀಲ್​​ ಬಳಸಿ ಕಂದಾಯ ಹಣ ಲಪಟಾಯಿಸಿದ ನಗರಸಭೆ ಸಿಬ್ಬಂದಿ? - undefined

ನಕಲಿ ಸೀಲ್ ಬಳಸಿ ಕಂದಾಯ ಲಪಟಾಯಿಸಿದ ನಗರಸಭೆ ಸಿಬ್ಬಂದಿ ಮೋಯಿನ್ ಪಟೇಲ್- ವಿಚಾರಣೆ ನಡೆಸಿದ ನಗರಸಭೆ ಪೌರಾಯುಕ್ತ ದೇವಾನಂದ ದೊಡ್ಡಮನಿ-  ಇನ್ನು ಮೋಯಿನ್ ಪಟೇಲ್ ತಪ್ಪೊಪ್ಪಿಕೊಂಡು ಹಣ ವಾಪಸ್​ ಕೊಡುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

ನಕಲಿ ಸೀಲ್ ಬಳಸಿ ಕಂದಾಯ ಲೂಟಿ

By

Published : May 9, 2019, 11:40 PM IST

ಕೊಪ್ಪಳ:ನಕಲಿ ಸೀಲ್ ಬಳಸಿ ನಗರಸಭೆ ಸಿಬ್ಬಂದಿಯೊಬ್ಬ ಮನೆ ಕಂದಾಯವನ್ನು ಲಪಟಾಯಿಸಿದ ಆರೋಪ ಕೊಪ್ಪಳ ಜಿಲ್ಲೆ ಗಂಗಾವತಿ ನಗರಸಭೆಯಲ್ಲಿ ಕೇಳಿ ಬಂದಿದೆ.

ನಕಲಿ ಸೀಲ್ ಬಳಸಿ ಕಂದಾಯ ಹಣ ಲಪಟಾಯಿಸಿದ ನಗರಸಭೆ ಸಿಬ್ಬಂದಿ

ಗಂಗಾವತಿ ನಗರಸಭೆ ಸಿಬ್ಬಂದಿ ಮೋಯಿನ್ ಪಟೇಲ್ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದೆ. ಗಂಗಾವತಿ ನಗರಸಭೆ 13ನೇ‌ ವಾರ್ಡಿನ ನಿವಾಸಿ ಮುನೀರ್ ಎಂಬುವವರು ನಿವೇಶನ ತೆರಿಗೆ ಪಾವತಿಸಲು ನಗರಸಭೆ ಸಿಬ್ಬಂದಿ ಮೋಯಿನ್ ಪಟೇಲ್ ಎಂಬಾತನಿಗೆ 15 ಸಾವಿರ‌ ರೂಪಾಯಿ ನೀಡಿದ್ದರಂತೆ. ಆದರೆ,‌ ಮೋಯಿನ್ ಪಟೇಲ್ ನಕಲಿ ಮುದ್ರೆ ಬಳಸಿ ಹಣವನ್ನು ಜೇಬಿಗಿಳಿಸಿಕೊಂಡಿದ್ದಾನೆ.

ಮನೆ ಕಂದಾಯವನ್ನು ಲಪಟಾಯಿಸಿದ ಆರೋಪ

ಇನ್ನು ಈ ಕುರಿತಂತೆ ಮುನೀರ್ ಅವರು ನಗರಸಭೆಗೆ ದೂರು ನೀಡಿದ್ದಾರೆ. ಕಂದಾಯ ಹಣ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ದೇವಾನಂದ ದೊಡ್ಡಮನಿ ಸಿಬ್ಬಂದಿ ಮೋಯಿನ್​ನನ್ನು ವಿಚಾರಣೆ ನಡೆಸಿದಾಗ ಮೋಯಿನ್ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಹಣ ವಾಪಾಸ್ ಕೊಡುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details