ಗಂಗಾವತಿ: ನಗರದ ಇಂದಿರಾ ವೃತ್ತ (ಜುಲೈನಗರ)ದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಗಂಗಾವತಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ! - ಕುಷ್ಟಗಿ ತಾಲೂಕಿನ ನಂದಾಪುರ ಗ್ರಾಮದ ನ್ಯೂಸ್
ಗಂಗಾವತಿಯ ಖಾಸಗಿ ಆಸ್ಪತ್ರೆಯಲ್ಲಿ 29 ವರ್ಷದ ಮಹಿಳೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
Gangavathi
ಕುಷ್ಟಗಿ ತಾಲೂಕಿನ ನಂದಾಪುರ ಗ್ರಾಮದ ಲಕ್ಷ್ಮಮ್ಮ ಬಾಲಶಂಕರ್ (29) ಎಂಬ ಮಹಿಳೆ ಹೆರಿಗೆಗಾಗಿ ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಒಂದು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಒಂದು ಮಗು 2 ಕೆಜಿ, ಮತ್ತೊಂದು 2.1 ಕೆಜಿ ಇದ್ದು, ಮತ್ತೊಂದು ಹೆಣ್ಣುಮಗು ಕೇವಲ 700 ಗ್ರಾಂ ಇತ್ತು. ಹೀಗಾಗಿ ಕಡಿಮೆ ತೂಕದ ಒಂದು ಹೆಣ್ಣು ಮಗು ಸಾವನ್ನಪ್ಪಿದೆ. ತಾಯಿ ಮತ್ತು ಎರಡು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
TAGGED:
Three childrens born news