ಕರ್ನಾಟಕ

karnataka

ETV Bharat / state

ಮೌಢ್ಯಕ್ಕೆ ಸಡ್ಡು: ಮಸಣದಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ತಾಯಿ! - ಗಂಗಾವತಿ ಇತ್ತೀಚಿನ ಸುದ್ದಿ

ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯಿತಿಯ ಪರಿಚಾರಕ ಹುದ್ದೆಯಲ್ಲಿರುವ ಅಂಬಮ್ಮ ಪಾಂಡುರಂಗ ಎಂಬ ಮಹಿಳೆ ತನ್ನ ಮೂರು ವರ್ಷದ ಮಗ ಯಮನೂರನ ಹುಟ್ಟುಹಬ್ಬವನ್ನು ಮಸಣದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ.

koppal
ಮಸಣದಲ್ಲಿ ಮಗನ ಹುಟ್ಟುಹಬ್ಬ

By

Published : Jun 11, 2021, 7:08 PM IST

ಗಂಗಾವತಿ: ಸ್ಮಶಾನ ಎಂದರೆ ಹಲವರು ಕನಸಲ್ಲೂ ಬೆಚ್ಚಿ ಬೀಳುತ್ತಾರೆ. ಮನುಷ್ಯನ ಅಂತಿಮ ಯಾತ್ರೆಯ ಕೊನೆಯ ನಿಲ್ದಾಣಕ್ಕೆ ಹೋಗಲು ಬಹುತೇಕರು ಹಿಂಜರಿಯುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಮಗನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯಿತಿಯ ಪರಿಚಾರಕ ಹುದ್ದೆಯಲ್ಲಿರುವ ಅಂಬಮ್ಮ ಪಾಂಡುರಂಗ ಎಂಬ ಮಹಿಳೆ ತನ್ನ ಮೂರು ವರ್ಷದ ಯಮನೂರ ಎಂಬ ಮಗನ ಹುಟ್ಟುಹಬ್ಬವನ್ನು ಮಸಣದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ.

ಮೌಢ್ಯಕ್ಕೆ ಸಡ್ಡು ಹೊಡೆದಿರುವ ಈ ಮಹಿಳೆ, ಮಗನ ಹುಟ್ಟುಹಬ್ಬದ ಅಂಗವಾಗಿ ಆಲ, ಬೇವು, ಹಲಸಿನಂತ ಸಸಿಗಳನ್ನು ನೆಟ್ಟು ಗಮನ ಸೆಳೆದಿದ್ದಾರೆ. ಈಕೆಯ ಸಾಹಸಕ್ಕೆ ಗ್ರಾಮದ ಕೆಲ ಯುವಕರು ಸಾಥ್ ನೀಡಿದ್ದಾರೆ.

ABOUT THE AUTHOR

...view details