ಕರ್ನಾಟಕ

karnataka

ಹೆರಿಗೆ ಸಂದರ್ಭದಲ್ಲಿ ಮಹಿಳೆಗೆ ರಕ್ತದ ಕೊರತೆ: ಅಗತ್ಯವಾದ ರಕ್ತದ ವ್ಯವಸ್ಥೆ ಮಾಡಿದ ಶಾಸಕ ಬಯ್ಯಾಪೂರ

By

Published : Nov 23, 2020, 8:29 AM IST

ಹೆರಿಗೆ ಸಮಯದಲ್ಲಿ ಮಹಿಳೆಗೆ ಅಗತ್ಯವಾದ ಓ ಪಾಸಿಟಿವ್ ಸಕಾಲಕ್ಕೆ ಸಿಗದೇ ಕಂಗಾಲಾಗಿದ್ದರು. ಈ ವೇಲೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ತಾಲೂಕಾ ಸರ್ಕಾರಿ ಆಸ್ಪತ್ರೆಯತ್ತ ದೌಡಾಯಿಸಿದ ಶಾಸಕರು, ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ರಕ್ತದ ವ್ಯವಸ್ಥೆ ಮಾಡಿಸಿದರು.

A MLA Amaregowda patil bayapur arranged blood for a woman in kushtagi
ಅಗತ್ಯವಾದ ರಕ್ತದ ವ್ಯವಸ್ಥೆ ಮಾಡಿದ ಶಾಸಕ ಬಯ್ಯಾಪೂರ

ಕುಷ್ಟಗಿ(ಕೊಪ್ಪಳ): ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಹೆರಿಗೆಗೆ ದಾಖಲಾದ ಮಹಿಳೆ ರಕ್ತದ ಕೊರತೆಯಿಂದ ನರಳುತ್ತಿದ್ದಳು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಮಹಿಳೆ ಸಂಕಷ್ಟಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಸ್ಪಂದಿಸಿದ್ದಾರೆ.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು, ಹೊಸಪೇಟೆಯಿಂದ ಕುಷ್ಟಗಿಗೆ ವಾಪಸಾಗುತ್ತಿದ್ದರು. ಆ ವೇಳೆ ಮಹಿಳೆಗೆ ಅಗತ್ಯವಾದ ಓ ಪಾಸಿಟಿವ್ ಸಕಾಲಕ್ಕೆ ಸಿಗದೇ ಕಂಗಾಲಾಗಿದ್ದರು. ಬಳಿಕ ಶಾಸಕ ಬಯ್ಯಾಪುರ ಅವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಅವರು, ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ರಕ್ತದ ವ್ಯವಸ್ಥೆ ಮಾಡಿಸಿದರು.

ಈ ವೇಳೆ ಡಾ. ಕೆ.ಎಸ್. ರಡ್ಡಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.

For All Latest Updates

TAGGED:

ABOUT THE AUTHOR

...view details