ಕುಷ್ಟಗಿ(ಕೊಪ್ಪಳ): ಮದ್ಯ ಕುಡಿದು ಹಾಳಾಗಬೇಡಲೇ ಎಂದು ತಮ್ಮ ಬುದ್ಧಿವಾದ ಹೇಳಿದ್ದಕ್ಕೆ ಸೀಮೆಎಣ್ಣೆ ಕುಡಿದು ವ್ಯಕ್ತಿಯೊಬ್ಬ ಅಸ್ವಸ್ಥನಾಗಿ ಆಸ್ಪತ್ರೆ ಸೇರಿಸಿದ ಘಟನೆ ಕುಷ್ಟಗಿಯಲ್ಲಿ ನಡೆದಿದೆ.
ಮದ್ಯ ಸೇವಿಸಬೇಡ ಎಂದಿದ್ದಕ್ಕೆ ಸೀಮೆಎಣ್ಣೆ ಕುಡಿದ ಭೂಪ! - ಸೀಮೆಎಣ್ಣೆ
ಕುಡಿದು ಜೀವನ ಹಾಳು ಮಾಡಿಕೊಳ್ಳಬೇಡ ಎಂದು ಮನೆಯವರು ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬ ಸೀಮೆಎಣ್ಣೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.
ಮದ್ಯ ಸೇವಿಸಬೇಡ ಎಂದಿದ್ದಕ್ಕೆ ಸೀಮೆಎಣ್ಣೆ ಕುಡಿದ ಭೂಪ
ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಬಸವರಾಜ್ ಕಲ್ಲಪ್ಪ ಜಿರ್ಲಿ ಎಂಬಾತ ಯಡವಟ್ಟು ಮಾಡಿಕೊಂಡವನು. ಮನೆಯವರು ಕುಡಿದು ಹಾಳಗಬೇಡ ಎಂದು ಬುದ್ಧಿವಾದ ಹೇಳಿದ್ದಾರೆ.
ಇದಕ್ಕೆ ಮನನೊಂದ ಯುವಕ ಮನೆಯಲ್ಲಿದ್ದ ಸೀಮೆಎಣ್ಣೆ ಸೇವಿಸಿ ಸಂಕಟ ತಾಳಲಾರದೆ ಮನೆಯವರಿಗೆ ಫೋನ್ ಮಾಡಿ ಸೀಮೆಎಣ್ಣೆ ಕುಡಿದಿರುವುದಾಗಿ ಹೇಳಿದ್ದಾನೆ. ಕೂಡಲೇ ಈತನನ್ನು ಆಸ್ಪತ್ರಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ.