ಕರ್ನಾಟಕ

karnataka

ETV Bharat / state

ಚಾರಣ ಬಳಗದಿಂದ ಸ್ವಚ್ಛವಾಯಿತು ರಾಮಲಿಂಗೇಶ್ವರ ದೇಗುಲದ ಗೋಪುರ - ಹೇಮಗುಡ್ಡದ ಪುರಾತನ ರಾಮಲಿಂಗೇಶ್ವರ ದೇಗುಲದ ಸುದ್ದಿ

ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೇಮಗುಡ್ಡದ ಪುರಾತನ ರಾಮಲಿಂಗೇಶ್ವರ ದೇಗುಲದ ಗೋಪುರವನ್ನ ಗಂಗಾವತಿಯ ಕ್ರಿಯಾಶೀಲ ಯುವಕರನ್ನೊಳಗೊಂಡ ಚಾರಣ ಬಳಗ ಎಂಬ ತಂಡ ಸ್ವಚ್ಛಗೊಳಿಸಿದೆ.

ರಾಮಲಿಂಗೇಶ್ವರ ದೇಗುಲ

By

Published : Nov 19, 2019, 12:06 PM IST

ಗಂಗಾವತಿ:ಐತಿಹಾಸಿಕ ಪ್ರದೇಶದಲ್ಲಿ ಸಿಗುವ ಪುರಾತನ ಕಾಲದ ಗೋಪುರ, ಗುಡಿ, ದೇಗುಲ, ಮಂದಿರ, ಕೋಟೆ, ಕೊತ್ತಲುಗಳ ಸಂರಕ್ಷಣೆಯ ಹೊಣೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯದ್ದು. ಆದರೆ ಇಲಾಖೆಯ ನಿರ್ಲಕ್ಷ್ಯಕ್ಕೆ ಎಷ್ಟೋ ಐತಿಹಾಸಿಕ ಸ್ಮಾರಕಗಳು ಕಣ್ಮರೆಯಾಗುತ್ತಿವೆ. ಈ ಪೈಕಿ ಹೇಮಗುಡ್ಡದ ಪುರಾತನ ರಾಮಲಿಂಗೇಶ್ವರ ದೇಗುಲವೂ ಒಂದು.

ಚಾರಣ ಬಳಗದಿಂದ ಸ್ವಚ್ಛವಾಯಿತು ರಾಮಲಿಂಗೇಶ್ವರ ದೇಗುಲದ ಗೋಪುರ

ಈ ಬಗ್ಗೆ ಗಮನ ಹರಿಸಿದ ನಗರದ ಕ್ರಿಯಾಶೀಲ ಯುವಕರನ್ನೊಳಗೊಂಡ ಚಾರಣ ಬಳಗ ಎಂಬ ತಂಡ, ದಂತ ವೈದ್ಯ ಶಿವಕುಮಾರ ಪಾಟೀಲ್ ನೇತೃತ್ವದಲ್ಲಿ ಗೋಪುರ ಸ್ವಚ್ಛಗೊಳಿಸಿದೆ.

ಯುವಕರ ಈ ಕಾರ್ಯಕ್ಕೆ ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆಯ ಅಧಿಕಾರಿಗಳೂ ಸಾಥ್​ ನೀಡಿದ್ದು, ಇದೀಗ ಗೋಪುರದ ವೈಭವ ಮತ್ತೆ ಮರುಕಳಿಸಿದೆ.

ABOUT THE AUTHOR

...view details