ಗಂಗಾವತಿ: ರಾಮನಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುತ್ತಿದ್ದರೆ, ಇತ್ತ ಹನುಮನೂರಿನಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ. ಹನುಮ ಉದಿಸಿದ ನಾಡು ಎಂದು ಖ್ಯಾತಿ ಪಡೆದ ತಾಲೂಕಿನ ಆನೆಗೊಂದಿ ಹಾಗೂ ಹನುಮನಹಳ್ಳಿಗೂ ರಾಮಾಯಣಕ್ಕೂ ಬಿಡಿಸಲಾಗದ ನಂಟಿದೆ.
ಅಪಹರಣಕ್ಕೆ ಒಳಗಾಗಿದ್ದ ಸೀತೆಯನ್ನು ಹುಡುಕುತ್ತಾ ರಾಮ-ಲಕ್ಷ್ಮಣರಿಬ್ಬರೂ ಆನೆಗೊಂದಿಗೆ ಬಂದಿದ್ದರು ಎಂಬ ಇತಿಹಾಸವಿದೆ. ಅದಕ್ಕೆ ಸಾಕ್ಷಿ ಎಂಬಂತೆ ರಾಮಾಯಣದ ಕಾಲಘಟ್ಟದಲ್ಲಿನ ಘಟನಾವಳಿಗಳಿಗೆ ಸಾಮ್ಯತೆಯಂತಿರುವ ಸಾಕಷ್ಟು ಪುರಾವೆ, ಸಾಕ್ಷ್ಯಗಳು, ಕುರುಹುಗಳು ಇಂದಿಗೂ ಕಾಣಸಿಗುತ್ತವೆ. ಇದೆಲ್ಲವನ್ನೂ ಈ ಭಾಗದ ಇತಿಹಾಸಕಾರರು ಸಾಬೀತುಪಡಿಸಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿ ಹನುಮನ ದೇವಸ್ಥಾನ ರಾಮಾಯಣದ ಕಥಾನಕದಲ್ಲಿ ಬರುವ ಪ್ರಮುಖ ಪಾತ್ರಧಾರಿ ಹನುಮ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟ ಎಂಬ ಐತಿಹ್ಯವಿದೆ. ಅಲ್ಲದೇ ರಾಮಾಯಣದ ಕಾವ್ಯ ಸಂಕಲನದಲ್ಲಿ ಬರುವ ಕಿಷ್ಕಿಂಧೆ, ವಾಲಿ-ಸುಗ್ರೀವರ ಕದನದ ಕುರುಹುಗಳು ಆನೆಗೊಂದಿ ಪರಿಸರದಲ್ಲಿದೆ ಎಂದು ಹೇಳಲಾಗುತ್ತಿದೆ.
ಆನೆಗೊಂದಿಯಲ್ಲಿ ಚಿಂತಾಮಣಿ ಎಂಬ ದೇವಸ್ಥಾನವಿದ್ದು, ಇದು ರಾಮಾಯಣ ಕಾಲಘಟ್ಟಕ್ಕಿತಲೂ ಪ್ರಾಚೀನ ಕಾಲದ್ದು ಎಂದು ಹೇಳಲಾಗುತ್ತಿದೆ. ತುಂಗಭದ್ರಾ ನದಿಯ ಪೂರ್ವಭಾಗದಲ್ಲಿರುವ ಚಿಂತಾಮಣಿಗೆ ಶ್ರೀರಾಮನ ಭೇಟಿ ನೀಡಿದ್ದ. ವಾಲಿ-ಸುಗ್ರೀವರ ಕದನದ ಸಂದರ್ಭದಲ್ಲಿ ನೆರವಾದ ಶ್ರೀರಾಮನ ವಾಲಿಯ ವಧೆ ಮಾಡಿದ ಸ್ಥಳ ಚಿಂತಾಮಣಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ರಾಮ ನೀರು ಕುಡಿದು ಧಣಿವಾರಿಸಿಕೊಂಡ ಕೊಳ ಪಂಪಾಸರೋವರ ಹಾಗೆಯೇ ರಾಮನಿಗಾಗಿ ಕಾದ ಶಬರಿ ಗುಹೆ ಹಾಗೂ ರಾಮ ನೀರು ಕುಡಿದು ಧಣಿವಾರಿಸಿಕೊಂಡ ಕೊಳ ಪಂಪಾಸರೋವರ ಇಂದಿಗೂ ಕಾಣಬಹುದು. ಇದೇ ಕಾರಣಕ್ಕೆ ಇದೀಗ ಹನುಮ ಹುಟ್ಟಿದ ಅಂಜನಾದ್ರಿ ವಿಶ್ವವಿಖ್ಯಾತವಾಗಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸುತ್ತಿದ್ದರೆ, ಇತ್ತ ರಾಮನ ಬಂಟ ಹನುಮನ ಊರು ಅಂಜನಾದ್ರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.
ಆಂಜನೇಯ ದೇವಸ್ಥಾನ ಪ್ರವೇಶಕ್ಕೆ ಆದೇಶ ಹೊರಡಿಸಿರುವ ಪತ್ರ