ಕೊಪ್ಪಳ: ಜಿಲ್ಲೆಯಲ್ಲಿ ಇಂದು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಓರ್ವ ಬಾಲಕಿ ಹಾಗೂ 2 ಕುರಿಗಳು ಸಾವನ್ನಪ್ಪಿವೆ.
ಕೊಪ್ಪಳ: ಸಿಡಿಲಿಗೆ ಓರ್ವ ಬಾಲಕಿ - 2 ಕುರಿಗಳು ಬಲಿ - koppal thunder news
ಯಲಬುರ್ಗಾ ತಾಲೂಕಿನ ಗೆದಗೇರಿ ತಾಂಡಾದಲ್ಲಿಂದು ಮಧ್ಯಾಹ್ನ ಸಿಡಿಲು ಬಡಿದು ರೂಪಾ ಚವ್ಹಾಣ (14) ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಅಲ್ಲದೇ ಸಾಲಭಾವಿ ಗ್ರಾಮದಲ್ಲಿ ಸಿಡಿಲಿಗೆ ಎರಡು ಕುರಿಗಳು ಬಲಿಯಾಗಿವೆ.
ಕೊಪ್ಪಳ: ಸಿಡಿಲಿಗೆ ಓರ್ವ ಬಾಲಕಿ - 2 ಕುರಿಗಳು ಬಲಿ
ಯಲಬುರ್ಗಾ ತಾಲೂಕಿನ ಗೆದಗೇರಿ ತಾಂಡಾದಲ್ಲಿಂದು ಮಧ್ಯಾಹ್ನ ಸಿಡಿಲು ಬಡಿದು ರೂಪಾ ಚವ್ಹಾಣ (14) ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಜಮೀನಿನಲ್ಲಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಇನ್ನು ಯಲಬುರ್ಗಾ ತಾಲೂಕಿನ ಸಾಲಭಾವಿ ಗ್ರಾಮದಲ್ಲಿ ಸಿಡಿಲಿಗೆ ಎರಡು ಕುರಿಗಳು ಬಲಿಯಾಗಿವೆ.