ಕೊಪ್ಪಳ: ವಾಹನಗಳ ಮೇಲೆ, ದೇಹದ ಮೇಲೆ ಜನ ತಮ್ಮ ನೆಚ್ಚಿನ ನಟ, ನಾಯಕನ ಹೆಸರು ಅಥವಾ ಭಾವಚಿತ್ರ ಹಾಕಿಸಿಕೊಳ್ಳುವುದು ನೋಡಿರುತ್ತೇವೆ. ಆದರೆ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಮಂಜುನಾಥ ತಮ್ಮ ಪುತ್ರನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಇಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಸಿದ್ದರಾಮಯ್ಯ ಅಂತ ಪುತ್ರನಿಗೆ ನಾಮಕರಣ ಮಾಡಿರುವ ಮಂಜುನಾಥ-ನೇತ್ರಾವತಿ ದಂಪತಿ, ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರು, ನೆರಹೊರೆಯವರಿಗೆ ಊಟ ಹಾಕಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಮಂಜುನಾಥ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿವಿಧ ಯೋಜನೆಗಳನ್ನು ಮೆಚ್ಚಿಕೊಂಡು ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಅನೇಕ ಕಲ್ಯಾಣ ಯೋಜನೆಗಳಿಂದಾಗಿ ತಮ್ಮ ಮೊದಲ ಮಗನಿಗೆ ಸಿದ್ದರಾಮಯ್ಯ ಎಂಬ ಹೆಸರಿಡಬೇಕೆಂದು ನಿಶ್ಚಿಯಿಸಿಕೊಂಡು, ಅದರಂತೆ ಪುತ್ರನಿಗೆ ಮಾಜಿ ಸಿಎಂ ಅವರ ಹೆಸರನ್ನು ನಾಮಕರಣ ಮಾಡಿದ್ದೇನೆ ಎನ್ನುತ್ತಾರೆ ಮಂಜುನಾಥ್.