ಗಂಗಾವತಿ:ಅರಣ್ಯ ಇಲಾಖೆಯಲ್ಲಿ ಕ್ಷೇಮ ನಿಧಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ನಿವೃತ್ತಿಯ ಅಂಚಿನಲ್ಲಿದ್ದ ನೌಕರ ಮಲ್ಲಿಕಾರ್ಜುನ್ ಎಂಬುವರು ಸಿಎಂಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ್, ಕಳೆದ ಮೂರೂವರೆ ದಶಕಗಳಿಂದ ಕ್ಷೇಮ ನಿಧಿ ಯೋಜನೆಯಡಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸಾವಿರಾರು ನೌಕರರು ಸೇವೆಗೆ ಸೇರಿದ್ದೇವೆ. ಆದರೆ ಇದುವರೆಗೂ ಯಾರೂ ಖಾಯಂ ಆಗಿಲ್ಲ.