ಕುಷ್ಟಗಿ (ಕೊಪ್ಪಳ): ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ, ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮುದಿಯಪ್ಪ ಮಲಿಯಪ್ಪ ಟಕ್ಕಳಕಿ (32) ಎಂಬ ರೈತ ಮೃತನಾಗಿದ್ದು, ಕುಟುಂಬದವರೊಂದಿಗೆ ಹೆಸರು ಬಿತ್ತನೆ ನಿರತರಾಗಿದ್ದ ವೇಳೆ, ಈ ಅವಘಡ ನಡೆದಿದೆ.
ಕುಷ್ಟಗಿಯಲ್ಲಿ ಸಿಡಿಲಿಗೆ ಬಲಿಯಾದ ರೈತ..! - ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಬಲಿಯಾದ ರೈತ
ಕುಟುಂಬದವರೊಂದಿಗೆ ಹೆಸರು ಬಿತ್ತನೆ ನಿರತರಾಗಿದ್ದ ವೇಳೆ ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ, ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕುಷ್ಟಗಿಯಲ್ಲಿ ಸಿಡಿಲಿಗೆ ಬಲಿಯಾದ ರೈತ
ಬಿರುಗಾಳಿ ಸಹಿತ ಮಳೆ ಶುರುವಾದಾಗ, ಮಳೆಯ ರಕ್ಷಣೆಗಾಗಿ ಗಿಡದ ಕೆಳಗೆ ನಿಂತಿದ್ದರು. ಈ ವೇಳೆ, ಸಿಡಿಲು ಬಡಿದಿದೆ. ಅವರ ಸಹೋದರನ ಮಗ ಮಲ್ಲಪ್ಪ ಅಸ್ವಸ್ಥಗೊಂಡಿದ್ದು, ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲಿಗೆ ಬಲಿಯಾದ ಮುದಿಯಪ್ಪನು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎಂ. ಸಿದ್ದೇಶ ಭೇಟಿ ನೀಡಿ ಪರಿಶೀಲಿಸಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರವನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ. ಇನ್ನು ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.