ಕರ್ನಾಟಕ

karnataka

ETV Bharat / state

ಬಾಕಿ ಕಟ್ಟದ್ದಕ್ಕೆ ಸಿಗದ ರಸಗೊಬ್ಬರ.. ಕೊಪ್ಪಳದ ಗೊಬ್ಬರ ಅಂಗಡಿಯಲ್ಲೇ ರೈತ ಆತ್ಮಹತ್ಯೆ - ರಸಗೊಬ್ಬರ ಅಂಗಡಿಯಲ್ಲೇ ವಿಷ ಸೇವಿಸಿ ರೈತ ಆತ್ಮಹತ್ಯೆ

ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

A Farmer committed suicide in Koppal  farmers suicide in karnataka  farmer suicide for loan  ಕೊಪ್ಪಳದಲ್ಲಿ ರೈತ ಆತ್ಮಹತ್ಯೆ  ರಸಗೊಬ್ಬರ ಅಂಗಡಿಯಲ್ಲೇ ವಿಷ ಸೇವಿಸಿ ರೈತ ಆತ್ಮಹತ್ಯೆ  ಸಾಲಭಾದೆಯಿಂದ ರೈತ ಆತ್ಮಹತ್ಯೆ
ರೈತ ಆತ್ಮಹತ್ಯೆ

By

Published : Jul 30, 2022, 3:59 PM IST

ಕೊಪ್ಪಳ: ರಸಗೊಬ್ಬರ ಅಂಗಡಿಯಲ್ಲಿನ ಬಾಕಿ ಹಣ ತೀರಿಸಲಾಗದೇ ಅದೇ ಅಂಗಡಿಯಲ್ಲಿ ರೈತರೊಬ್ಬರು ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಪ್ಪಳ ನಗರದ ಗಂಜ್​​ನಲ್ಲಿರುವ ಅಂಗಡಿಯಲ್ಲಿ ಹನಕಟಿ ಗ್ರಾಮದ ರೈತ ರವಿ ಲಕ್ಕುಂಡಿ(38) ಆತ್ಮಹತ್ಯೆ ಮಾಡಿಕೊಂಡವರು.

ಇವರು ಮೆಕ್ಕೆಜೋಳದ ಬೀಜ ಹಾಗೂ ಗೊಬ್ಬರವನ್ನು ರಸಗೊಬ್ಬರ ಅಂಗಡಿಯಲ್ಲಿ ಸಾಲವಾಗಿ ಪಡೆದುಕೊಂಡು, ಬಳಿಕ ಬೆಳೆಯಿಂದ ಬಂದ ಆದಾಯದಿಂದ ಸ್ವಲ್ಪಮಟ್ಟಿನ ಸಾಲ ತೀರಿಸಿದ್ದರಂತೆ. ಆದ್ರೆ ಇನ್ನಷ್ಟು ಬಾಕಿ ಹಣ ತೀರಿಸಬೇಕಿತ್ತಂತೆ. ಈ ಮಧ್ಯೆ ರೈತ ಮತ್ತೆ ಸಾಲ ಕೇಳಲು ಬಂದಾಗ ಅಂಗಡಿಯವರು ನೀಡಿರಲಿಲ್ಲವಂತೆ. ಇದರಿಂದ ನೊಂದ ರೈತ ಅಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಎರಡು ದಿನಗಳ ಹಿಂದೆ ಕ್ರಿಮಿನಾಶಕ ಸೇವಿಸಿದ್ದ ರೈತನನ್ನು ಆ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದ್ದಾರೆ. ಕೊಪ್ಪಳ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

(ಇದನ್ನೂ ಓದಿ: ಬ್ಯಾಂಕ್​ ಮುಂದೆ ರೈತನ ಶವವಿಟ್ಟು ಪ್ರತಿಭಟನೆ ಯತ್ನ: ರೈತರು - ಪೊಲೀಸರ ನಡುವೆ ವಾಗ್ವಾದ)

ABOUT THE AUTHOR

...view details