ಕರ್ನಾಟಕ

karnataka

ETV Bharat / state

ರೆಡ್ಡಿ ರಾಜಕೀಯಕ್ಕೆ ಶುಭವಾಗಲಿ ಎಂದು ಹರಕೆ ಸಲ್ಲಿಸಿದ ಅಭಿಮಾನಿ...! - janardhana reddy

ಜನಾರ್ದನ ರೆಡ್ಡಿಯ ರಾಜಕೀಯ ಜೀವನಕ್ಕೆ ಶುಭವಾಗಲಿ ಎಂದು ಅವರ ಅಭಿಮಾನಿಯೊಬ್ಬರು ಅಂಜನಾದ್ರಿ ದೇಗುಲಕ್ಕೆ ಹರಕೆ ಹೊತ್ತಿದ್ದರು.

janardhana reddy
ಹರಕೆ

By

Published : Dec 31, 2022, 1:31 PM IST

ಗಂಗಾವತಿ(ಕೊಪ್ಪಳ):ನೂತನ ಪಕ್ಷ ಕಟ್ಟಿದ ಜಿ. ಜನಾರ್ದನ ರೆಡ್ಡಿ ಅವರ ರಾಜಕೀಯ ಜೀವನ ಪ್ರಗತಿ ಸಾಧಿಸಲಿ ಎಂದು ಆಶಿಸಿ ಭಕ್ತರೊಬ್ಬರು ಅಂಜನಾದ್ರಿ ದೇಗುಲಕ್ಕೆ 101 ತೆಂಗಿನಕಾಯಿ ಮತ್ತು 101 ಕೆಜಿಯ ಸಿಹಿ ಬೂಂದಿ ಲಡ್ಡನ್ನು ಅರ್ಪಿಸಿದ್ದಾರೆ.

ರೆಡ್ಡಿ ಅಭಿಮಾನಿ ಯಮನೂರಪ್ಪ ಪುಂಡಗೌಡ ಶನಿವಾರ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ತಮ್ಮ ಹರಕೆಯ ಸಾಮಗ್ರಿಗಳನ್ನು ದೇವರಿಗೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ರೆಡ್ಡಿಗೆ 101 ಕುರಿಗಳನ್ನು ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಜನವರಿ 7 ರಂದು ಕುರಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಗೆ ಬಿಸಿ ತಟ್ಟಲಿದೆಯಾ..?

ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರು ಡಿಸೆಂಬರ್​ 25 ರಂದು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ವನ್ನು ಘೋಷಿಸಿದ್ದರು. ಬಿಜೆಪಿ ಜೊತೆಗಿನ ಸಂಬಂಧಕ್ಕೆ ವಿದಾಯ ಹೇಳಿ ತಮ್ಮದೇ ಹೊಸ ಪಕ್ಷವನ್ನು ಕಟ್ಟಿದ್ದಾರೆ.

ABOUT THE AUTHOR

...view details