ಕರ್ನಾಟಕ

karnataka

ETV Bharat / state

ಬೇಸಿಗೆಯಲ್ಲಿ ನೀರೊದಗಿಸುತ್ತಿದ್ದ ಸಾರ್ವಜನಿಕ ಕೊಳವೆಬಾವಿ ಮುಚ್ಚಿತು 'ಸಾರಥಿ' ಕುಟುಂಬ!

ಗ್ರಾಮ ಪಂಚಾಯತ್​ನಿಂದ ಕೊರೆಸಿದ್ದ ಕೊಳವೆ ಬಾವಿಗೇ ಕಲ್ಲು ಮಣ್ಣು ತುಂಬಿದ ಕುಟುಂಬ- ಬೇಸಿಗೆಯಲ್ಲೂ ಎರಡೂವರೆ ಇಂಚು ನೀರೊದಗಿಸುತ್ತಿದ್ದ ಬೋರ್​ವೆಲ್​ ಬಂದ್​- ಬೋರ್​ ತಮ್ಮ ಜಾಗದಲ್ಲಿದೆ ಎಂದು ಆರೋಪಿಸಿ ಜಲಮೂಲಕ್ಕೆ ಕಲ್ಲು ಹಾಕಿದ ಕೊಪ್ಪಳ ಜಿಲ್ಲೆಯ ಸಾರಥಿ‌ ಕುಟುಂಬಸ್ಥರು

ಕೊಳವೆ ಬಾವಿ ಮುಚ್ಚುತ್ತಿರುವ ಕುಟುಂಬ

By

Published : May 5, 2019, 10:07 AM IST

ಕೊಪ್ಪಳ:ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗಾಗಿ ಗ್ರಾಮ ಪಂಚಾಯತ್​ನಿಂದ ಕೊರೆಸಿದ್ದ ಕೊಳವೆಬಾವಿಗೆ ಕುಟುಂಬವೊಂದರ ಸದಸ್ಯರು ಕಲ್ಲು-ಮಣ್ಣು ಹಾಕಿ‌‌‌ ಮುಚ್ಚಿರುವ ವಿಚಿತ್ರ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಎಂ. ಗುಡದೂರಿನಲ್ಲಿ‌ ನಡೆದಿದೆ.

ನಾಗಪ್ಪ ಸಾರಥಿ ಎಂಬುವರ ಮಕ್ಕಳು ಕೊಳವೆಬಾವಿಗೆ ಕಲ್ಲು ಮಣ್ಣು ಹಾಕಿ ಮುಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಪಂಚಾಯತ್​ ಕೊರೆಸಿರುವ ಈ ಕೊಳವೆಬಾವಿ ತಮ್ಮ ಜಮೀನಿನಲ್ಲಿದೆ. ಅದು ಸರ್ಕಾರಿ ಜಾಗದಲ್ಲಿ ಇಲ್ಲವೆಂದು ವಾದಿಸಿ ಸಾರಥಿ‌ ಕುಟುಂಬದವರು ಎರಡೂವರೆ ಇಂಚು ನೀರು ಬಿದ್ದಿದ್ದ ಆ ಕೊಳವೆ ಬಾವಿಯನ್ನು ಕಲ್ಲು-ಮಣ್ಣು ಹಾಕಿ ಮುಚ್ಚಿದ್ದಾರೆ.

ಕೊಳವೆ ಬಾವಿ ಮುಚ್ಚುತ್ತಿರುವ ಸಾರಥಿ ಕುಟುಂಬಸ್ಥರು

ರಸ್ತೆ ಪಕ್ಕದಲ್ಲಿರುವ ಕೊಳವೆ ಬಾವಿಯನ್ನು ಕಲ್ಲು-ಮಣ್ಣು ಹಾಕಿ ಮುಚ್ಚುತ್ತಿರುವ ದೃಶ್ಯ 'ಈಟಿವಿ ಭಾರತ' ಕ್ಕೆ ಲಭ್ಯವಾಗಿದೆ. ಈ ಕುರಿತಂತೆ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಕುಷ್ಟಗಿ ತಹಶಿಲ್ದಾರ್ ಕೆ.ಎಂ‌. ಗುರುಬಸವರಾಜ, ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ರಸ್ತೆಯ ಪಕ್ಕದಲ್ಲಿ ಕೊಳವೆಬಾವಿ ಕೊರೆಸಲಾಗಿತ್ತು. ಎರಡೂವರೆ ಇಂಚು ನೀರು ಸಹ ಬಿದ್ದಿತ್ತು. ಆ ಕೊಳವೆಬಾವಿ ಸಾರಥಿ ಕುಟುಂಬದ ಜಮೀನಿನಲ್ಲಿ ಇಲ್ಲ. ರಸ್ತೆ ಪಕ್ಕದ ಸರ್ಕಾರಿ ಜಾಗದಲ್ಲಿದೆ. ಹೀಗಿದ್ದಾಗ್ಯೂ ನಾಗಪ್ಪ ಸಾರಥಿ ಅವರ ಇಬ್ಬರು ಮಕ್ಕಳು ಕಲ್ಲು, ಮಣ್ಣು ಹಾಕಿ ಮುಚ್ಚಿದ್ದಾರೆ. ಅವರ ವಿರುದ್ಧ ದೂರು ದಾಖಲಿಸುವಂತೆ ಸಂಬಂಧಿಸಿದ ಪಂಚಾಯತ್​ ಪಿಡಿಓಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details