ಗಂಗಾವತಿ/ಕೊಪ್ಪಳ: ರೋಡ್ ರೋಲರ್ ಹರಿದು ಅದರ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯ ಆನೆಗೊಂದಿ ರಸ್ತೆಯಲ್ಲಿರುವ ಆಂಜನೇಯ ಕಣಿವೆ ಬಳಿ ಸಂಭವಿಸಿದೆ.
ರೋಡ್ ರೋಲರ್ ಹರಿದು ಚಾಲಕ ಸ್ಥಳದಲ್ಲೇ ಸಾವು - gangavathi latest crime news
ರೋಡ್ ರೋಲರ್ ಹರಿದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗಂಗಾವತಿ ನಗರದ ಹೊರ ವಲಯದಲ್ಲಿ ನಡೆದಿದೆ.
ರಸ್ತೆ ಕಾಮಗಾರಿಗಳಿಗೆ ಬಳಕೆಯಾಗುವ ರೋಡ್ ರೋಲರ್ ಹರಿದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ನಗರದ ನೀಲಕಂಠೇಶ್ವರ ವೃತ್ತದ ನಿವಾಸಿ ಸುರೇಶ್ (35) ಎಂದು ಗುರುತಿಸಲಾಗಿದೆ. ರೋಲರ್ನ ಚಕ್ರಗಳಡಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆನೆಗೊಂದಿಯಿಂದ ಬರುವಾಗ ಕಣಿವೆ ಆಂಜನೇಯ ದೇಗುಲದ ಬಳಿಯ ಇಳಿಜಾರು ಪ್ರದೇಶದಲ್ಲಿ ವಾಹನವನ್ನು ನ್ಯೂಟ್ರಲ್ ಮಾಡಿದ್ದಾರೆ. ಆದರೆ ವಾಹನದ ನಿಯಂತ್ರಣ ಸಿಗದ ಹಿನ್ನೆಲೆ ರಸ್ತೆ ಪಕ್ಕದ ಗದ್ದೆಗೆ ನುಗ್ಗಿದೆ. ಮೈ ಮೇಲೆ ಬೀಳುವ ಆತಂಕದಿಂದ ಸುರೇಶ್ ವಾಹನದಿಂದ ಜಿಗಿದಿದ್ದಾರೆ.
ಆದರೆ ಅವರ ಮೇಲೆಯೇ ವಾಹನ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
gangavathi latest crime news