ಗಂಗಾವತಿ: ಕಷ್ಟಗಳು ಎದುರಾದಾಗ ಎಲ್ಲರೂ ದೇವರ ಮೊರೆ ಹೋಗೋದು ಸಹಜ. ಆದ್ರೆ ಇಲ್ಲೋರ್ವ ಭಕ್ತ ತನಗೆ ಒದಗಿ ಬಂದಿರುವ ಸಂಕಷ್ಟ ನಿವಾರಿಸಿ, ಸಾಕಷ್ಟು ಹಣ ಕೊಡು, ಕಳೆದುಕೊಂಡಿರುವ ಶಕ್ತಿ ಮತ್ತೆ ದಯಪಾಲಿಸು, ಮನೆ ಕಟ್ಟಡ ಪೂರ್ಣಗೊಳಿಸು ಹೀಗೆ ನಾನಾ ಬೇಡಿಕೆಗಳನ್ನಿಟ್ಟು ಅಂಜನಾದ್ರಿಯ ಆಂಜನೇಯನಿಗೆ ಪತ್ರ ಬರೆದಿದ್ದಾನೆ.
ಅಂಜನಾದ್ರಿಯ ಭಜರಂಗಿಗೇ ಪತ್ರ ಬರೆದ ಭಕ್ತ... ಅವನ ಬೇಡಿಕೆಗಳೇನು ಗೊತ್ತಾ?! - ಭಕ್ತ ಹರಕೆ
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಭಕ್ತನೋರ್ವನ ಪತ್ರ ಸಂಚಲನ ಮೂಡಿಸಿದೆ. ಅಯ್ಯೋ ಅದ್ಯಾಕೆ ಅಂತಿರಾ? ಹಾಗಾದ್ರೆ ಈ ಸುದ್ದಿ ಓದಿ...
ಭಜರಂಗಿ
ತಾಲೂಕಿನ ಅಂಜನಾದ್ರಿಯಲ್ಲಿ ಇಂದು ಭಕ್ತರು ಸಲ್ಲಿಸಿದ ಕಾಣಿಕೆಯ ಪೆಟ್ಟಿಗೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತೆಗೆದು ನೋಡಿದಾಗ ನೂರು ರೂಪಾಯಿ ನೋಟಿನಲ್ಲಿ ಪತ್ರವೊಂದನ್ನು ಸುತ್ತಿ ಭಕ್ತನೋರ್ವ ತನ್ನ ಬೇಡಿಕೆ ಪತ್ರವನ್ನು ದೇವರಿಗೆ ಸಲ್ಲಿಸಿದ್ದಾನೆ.
ತೋರಣಗಲ್ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಎಂಬಾತ ತನಗೆ ಒದಗಿರುವ ಸಂಕಷ್ಟಗಳನ್ನು ಪತ್ರ ರೂಪಕ್ಕೆ ಇಳಿಸಿ ದೇವರ ಹುಂಡಿಗೆ ಹಾಕಿದ್ದಾನೆ. ಬೇಡಿಕೆಗಳನ್ನು ಈಡೇರಿಸಿದರೆ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿ, ಸಾಮೂಹಿಕ ವಿವಾಹ ನೆರವೇರಿಸುತ್ತೇನೆ ಭಕ್ತ ಹರಕೆ ಹೊತ್ತಿದ್ದಾನೆ.