ಕರ್ನಾಟಕ

karnataka

ETV Bharat / state

ಕೋವಿಡ್ ಕೇರ್ ಸೆಂಟರ್‌ಗೆ ಕರೆದೊಯ್ಯುವ ಭೀತಿಯಿಂದ ಗುಡ್ಡ ಸೇರಿದ ಸೋಂಕಿತ - ಕುಷ್ಟಗಿಯಲ್ಲಿ ಗುಡ್ಡ ಸೇರಿದ್ದ ಕೊರೊನಾ ಸೋಂಕಿತ,

ಕೋವಿಡ್ ಕೇರ್ ಸೆಂಟರ್ ಕರೆದೊಯ್ಯುವ ಭೀತಿಯಿಂದ ಕೊರೊನಾ ಸೋಂಕಿತನೊಬ್ಬ ಗುಡ್ಡಕ್ಕೆ ತೆರಳಿದ್ದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.

corona infected hidden, corona infected hidden in Hill, corona infected hidden in Hill at Kushtagi, Kushtagi corona news, ಗುಡ್ಡ ಸೇರಿದ್ದ ಕೊರೊನಾ ಸೋಂಕಿತ, ಕುಷ್ಟಗಿಯಲ್ಲಿ ಗುಡ್ಡ ಸೇರಿದ್ದ ಕೊರೊನಾ ಸೋಂಕಿತ, ಕುಷ್ಟಗಿ ಕೊರೊನಾ ಸೋಂಕಿತ ಸುದ್ದಿ,
ಕೋವಿಡ್ ಕೇರ್ ಸೆಂಟರ್ ಕರೆದೊಯ್ಯುವ ಭೀತಿಗೆ ಗುಡ್ಡ ಸೇರಿದ್ದ ಸೋಂಕಿತ

By

Published : May 24, 2021, 7:19 AM IST

ಕುಷ್ಟಗಿ (ಕೊಪ್ಪಳ): ಕೋವಿಡ್​ ಕೇರ್​ ಸೆಂಟರ್​ಗೆ ಕರೆದೊಯ್ಯುತ್ತಾರೆ ಎಂದು ಆತಂಕಗೊಂಡ ಸೋಂಕಿತರೊಬ್ಬರು ಹೆದರಿ ಗುಡ್ಡ ಸೇರಿದ ಘಟನೆ ಹಿರೇಮನ್ನಾಪೂರದಲ್ಲಿ ನಡೆದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವೈರಸ್ ವ್ಯಾಪಿಸುವುದನ್ನು ನಿಯಂತ್ರಿಸಲು ಹೋಂ ಐಸೋಲೇಶನ್​ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗೆ ಶಿಫ್ಟ್ ​ಮಾಡಲಾಗುತ್ತಿದೆ. ಕೋವಿಡ್ ಕೇರ್​ ಸೆಂಟರ್​ಗೆ ಬರಲು ನಿರಾಕರಿಸುವವರ ಮನವೊಲಿಸಿ ಅವರನ್ನು ಶಿಫ್ಟ್​ ಮಾಡಲಾಗುತ್ತಿದೆ.

ಹಿರೇಮನ್ನಾಪೂರ ಗ್ರಾಮದಲ್ಲಿ ಪಿಎಸೈ ತಿಮ್ಮಣ್ಣ ನಾಯಕ್, ತಾ.ಪಂ.ಇಓ ತಿಮ್ಮಪ್ಪ ಹೋಂ ಐಸೋಲೇಶನ್​ನಲ್ಲಿದ್ದ ಕೊರೊನಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗೆ ಕರೆ ತರಲು ಮುಂದಾದರು. ಇದರ ಸುಳಿವರಿತ ವ್ಯಕ್ತಿಯೊಬ್ಬ ಹಿರೇಮನ್ನಪೂರ ಪಕ್ಕದ ಗುಡ್ಡದ ಪಕ್ಕದಲ್ಲಿ ಅಡಗಿ ಕುಳಿತಿದ್ದು, ಆತನನ್ನು ಪೊಲೀಸರು ಪತ್ತೆ ಹಚ್ಚಿದರು.

ಹೋಂ ಐಸೋಲೇಶನ್​ನಿಂದ ಇತರರಿಗೂ ಕೊರೊನಾ ಸೋಂಕು ಹಬ್ಬುವ ಸಾಧ್ಯತೆ ಇದೆ. ನಿಮ್ಮಿಂದ ಇಡೀ ಕುಟುಂಬಕ್ಕೆ ರೋಗ ಹರಡಲಿದ್ದು, ಅವರೂ ಸಹ ತೊಂದರೆಗೆ ಒಳಗಾಗುತ್ತಾರೆ. ಮುನ್ನೆಚ್ಚರಿಕೆಯಿಂದಾಗಿ ನೀವು ಕೋವಿಡ್​ ಕೇರ್ ಸೆಂಟರ್​ಗೆ ಶಿಫ್ಟ್​ ಆಗಬೇಕು. ಈ ಮೂಲಕ ನಿಮ್ಮ ಕುಟುಂಬಸ್ಥರ ಆರೋಗ್ಯ ಮತ್ತು ನಿಮ್ಮ ಆರೋಗ್ಯವನ್ನೂ ಕಾಪಾಡಿದಂತಾಗುತ್ತದೆ ಎಂದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನಿಗೆ ತಿಳುವಳಿಕೆ ಹೇಳಿದರು. ಬಳಿಕ ಆ ವ್ಯಕ್ತಿಯನ್ನು ಕೋವಿಡ್​ ಕೇರ್​ ಸೆಂಟರ್​ಗೆ ಕರೆದೊಯ್ಯಲಾಯಿತು.

ಪಿಎಸೈ ತಿಮ್ಮಣ್ಣ ನಾಯಕ್ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿ, ಹಿರೆಮನ್ನಾಪೂರದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಹೋಂ ಐಸೋಲೇಶನ್​ನಲ್ಲಿದ್ದ 11 ಜನರನ್ನು ಕೇರ್ ಸೆಂಟರ್​ಗೆ ತರಲಾಗಿದೆ ಎಂದರು.

ABOUT THE AUTHOR

...view details