ಕರ್ನಾಟಕ

karnataka

ETV Bharat / state

ಕೃಷ್ಣನ ಬಾಲ ಲೀಲೆ ಕಸಿದ ಸೆರಬಲ್ ಪಾಲ್ಸಿ.. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನೆರವಿಗೆ ಅಂಗಲಾಚಿದ ಹೆತ್ತಮ್ಮ - ಮಗ ಕೃಷ್ಣಾ ಬಡಿಗೇರ ಹುಟ್ಟಿದ 15

ಈ ಬಾಲಕನ ಕೃಷ್ಣನ ಬಾಲಲೀಲೆಯನ್ನು ನೋಡುವ ಭಾಗ್ಯವನ್ನು ಸೆರಬಲ್ ಪಾಲ್ಸಿ ರೋಗ ಕಸಿದಿದೆ. ಮಗುವಿನ ಸ್ಥಿತಿಯು ಕಾಡುವ ಬಡತನ ಬದುಕಿನ ಆರದ ಗಾಯ ಹೆತ್ತಮ್ಮಳಿಗೆ ಬರೆ ಎಳೆದಿದಂತಾಗಿದೆ. ಈ ಹಣ ಹೊಂದಿಸಲಾಗದೇ ಅಸಹಾಯಕರಾಗಿರುವ ಪಾಲಕರು, ದೇವರನ್ನು ಶಪಿಸುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲ..

A child suffering from Cerebral Palsy Disease news
ಕೃಷ್ಣನ ಬಾಲ ಲೀಲೆ ಕಸಿದ ಸೆರಬಲ್ ಪಾಲ್ಸಿ

By

Published : Feb 20, 2021, 7:02 PM IST

ಕುಷ್ಟಗಿ :ಮನೆಯಂಗಳದಲ್ಲಿ ಆಟವಾಡಿಕೊಂಡಿರಬೇಕಾದ ಮೂರು ವರ್ಷದ ಪೋರ ಇನ್ನೂ ತಾಯಿ ಮಡಿಲಲ್ಲಿ ಆರೈಕೆಯಲ್ಲಿದ್ದಾನೆ. ಬಾಲ್ಯದಲ್ಲಿ ವಕ್ಕರಿಸಿದ ಸೆರಬಲ್ ಪಾಲ್ಸಿ (ಮಿದುಳು ನಿಷ್ಕ್ರೀಯತೆ) ಹಿನ್ನೆಲೆ ಈ ಅವಸ್ಥೆಯಲ್ಲಿದ್ದಾನೆ.

ಕೃಷ್ಣನ ಬಾಲ ಲೀಲೆ ಕಸಿದ ಸೆರಬಲ್ ಪಾಲ್ಸಿ

ಓದಿ: ಬೆಲೆ ಟ್ಯಾಗ್ ಬಗ್ಗೆ ಯೋಚನೆ ಮಾಡಲ್ಲ, ಧೋನಿ ಜತೆ ಆಟವಾಡುವುದೇ 'ಆಶೀರ್ವಾದ': ಕನ್ನಡಿಗ ಗೌತಮ್​!

ಈ ಬಾಲಕನ ಚಿಕಿತ್ಸೆ ಆರೈಕೆಗಾಗಿ ಸರ್ಕಾರದ ನೆರವಿಗೆ ತಾಯಿ ಪ್ರಮೀಳಾ ಬಡಿಗೇರ ರ್ಯಾವಣಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಂಗಲಾಚಿದ ಪ್ರಸಂಗ ನಡೆಯಿತು. ರ್ಯಾವಣಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜನರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಾಯಿ ಪ್ರಮೀಳಾ ತಹಶೀಲ್ದಾರ್ ಎಂ.ಸಿದ್ದೇಶ್ ಅವರಲ್ಲಿ ನೆರವು ಯಾಚಿಸಿದರು.

ತಮ್ಮ ಮಗ ಕೃಷ್ಣಾ ಬಡಿಗೇರ ಹುಟ್ಟಿದ 15 ದಿನ ಚೆನ್ನಾಗಿಯೇ ಇದ್ದ. ನಂತರ ಕೈಕಾಲು ಸ್ವಾಧೀನ ಕಳೆದುಕೊಂಡು ನಿಶ್ಚಲನಾಗಿದ್ದ, ಬದಾಮಿ, ಬಾಗಲಕೋಟೆ, ಬೆಂಗಳೂರು ನಿಮ್ಹಾನ್ಸ್​​​ಗೆ ಚಿಕಿತ್ಸೆಗೆ ದಾಖಲಿಸಿದರೂ ಗುಣಮುಖವಾಗುವ ಲಕ್ಷಣಗಳಿಲ್ಲ ಎಂದು ಅಳಲು ತೋಡಿಕೊಂಡರು.

ಅಲ್ಲಿಯೇ ಇದ್ದ ತಾಲೂಕಾ ವೈದ್ಯಾಧಿಕಾರಿ ಮಗುವಿನ ಮೆಡಿಕಲ್ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ, ಈ ಮಗು 5 ವರ್ಷದ ಬಳಿಕವೇ ಶಸ್ತ್ರ ಚಿಕಿತ್ಸೆಯಿಂದ ಗುಣಮುಖರಾಗಲು ಸಾಧ್ಯವಿದೆ. ಆದರೆ, ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು. ಅಂತ್ಯೋದಯ ಕಾರ್ಡ್​ ಇದ್ದರೆ ಔಷಧ, ಮಾತ್ರೆಗೆ ಅಗತ್ಯ ನೆರವಿನ ಕುರಿತು ಭರವಸೆ ನೀಡಿದರು.

ಈ ಬಾಲಕನ ಕೃಷ್ಣನ ಬಾಲಲೀಲೆಯನ್ನು ನೋಡುವ ಭಾಗ್ಯವನ್ನು ಸೆರಬಲ್ ಪಾಲ್ಸಿ ರೋಗ ಕಸಿದಿದೆ. ಮಗುವಿನ ಸ್ಥಿತಿಯು ಕಾಡುವ ಬಡತನ ಬದುಕಿನ ಆರದ ಗಾಯ ಹೆತ್ತಮ್ಮಳಿಗೆಬರೆ ಎಳೆದಿದಂತಾಗಿದೆ. ಈ ಹಣ ಹೊಂದಿಸಲಾಗದೇ ಅಸಹಾಯಕರಾಗಿರುವ ಪಾಲಕರು, ದೇವರನ್ನು ಶಪಿಸುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲ. ಈ ನಡುವೆಯೂ ಭರವಸೆ ಕಳೆದುಕೊಳ್ಳದೇ ಇಬ್ಬರು ಮಕ್ಕಳಲ್ಲಿ ಗಂಡು ಮಗುವಿಗೆ ಈ ರೀತಿಯಾಗಿರುವುದು ಜೀವನವಿಡೀ ಮರಗುವಂತಾಗಿದೆ.

ABOUT THE AUTHOR

...view details