ಕರ್ನಾಟಕ

karnataka

ETV Bharat / state

ಹೆಡ್​​ಫೋನ್​​ ಹಾಕ್ಕೊಂಡು ಮೈಮರೆಯುವ ಮುನ್ನ ಈ ಸ್ಟೋರಿ ನೋಡಿ.. - gangavathi latest crime news

ಹೆಡ್​​ಫೋನ್​​ ಹಾಕಿಕೊಂಡು ಹಾಡು ಕೇಳುತ್ತಾ ಬರುತ್ತಿದ್ದ ಯುವಕನೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

train
ರೈಲಿಗೆ ಸಿಲುಕಿ ಯುವಕ ಸಾವು

By

Published : Nov 27, 2019, 7:13 PM IST

ಗಂಗಾವತಿ/ಕೊಪ್ಪಳ:ಕಿವಿಯಲ್ಲಿ ಹೆಡ್​​​ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಬರುತ್ತಿದ್ದ ಯುವಕನೊಬ್ಬ ಆಯತಪ್ಪಿ ಹಳಿಗೆ ಬಿದ್ದು, ರೈಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.

ರೈಲಿಗೆ ಸಿಲುಕಿ ಯುವಕ ಸಾವು

ಮೃತನನ್ನು ಗುಜರಾತ್ ರಾಜ್ಯದ ನಂದೇಡ್ ಜಿಲ್ಲೆಯ ದಾವತ್ ಎಂಬ ಗ್ರಾಮದ ಭರತ್ ಎಂಬುವವರ ಮಗ ವಿಫುಲ್ (18) ಎಂದು ಗುರುತಿಸಲಾಗಿದೆ.

ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಕೆಲಸಕ್ಕೆಂದು ಗುಜರಾತಿನ ಹಲವು ಯುವಕರೊಂದಿಗೆ ಬಂದಿದ್ದ ಈತ, ಬುಧವಾರ ಸಂಜೆ ನಗರದ ಕೊಪ್ಪಳ ರಸ್ತೆಯಲ್ಲಿರುವ ಹಳಿಯನ್ನು ದಾಟಿ ಬಹಿರ್ದೆಸೆಗೆ ಹೋಗಿದ್ದಾನೆ. ಅಲ್ಲಿಂದ ಬರುವಾಗ ಕಿವಿಯಲ್ಲಿ ಹೆಡ್‌ಫೋನ್ ಸಿಕ್ಕಿಸಿಕೊಂಡು ಹಳಿ ದಾಟುತ್ತಿರುವಾಗ ಆಯತಪ್ಪಿ ರೈಲು ಹಳಿಗೆ ಬಿದ್ದು,ರೈಲಿಗೆ ಸಿಲುಕಿ ದುರ್ಮರಣ ಹೊಂದಿದ್ದಾನೆ.

ಗಂಗಾವತಿಯಲ್ಲಿ ರೈಲು ಸೇವೆ ಆರಂಭವಾಗಿ ಕೇವಲ 9 ತಿಂಗಳ ಅವಧಿಯೊಳಗೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ABOUT THE AUTHOR

...view details