ಕರ್ನಾಟಕ

karnataka

ETV Bharat / state

ಕಟ್ಟಡ ಕಾರ್ಮಿಕನ ಮೇಲೆ ಲಾಠಿ: ಮೆಸೇಜ್​​​ಗೆ ತಕ್ಷಣ ಸ್ಪಂದಿಸಿದ ಡಿಸಿ - coronavirus update

ಕೊರೊನಾದಂತ ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ಸದಾ ಮಗ್ನವಾಗಿರುವ ಜಿಲ್ಲಾಧಿಕಾರಿ ಸುನಿಲ್ ಕುಮಾರ್, ಸಾಮಾನ್ಯ ಕಟ್ಟಡ ಕಾರ್ಮಿಕನೊಬ್ಬ ಮಾಡಿದ ಕೇವಲ ವಾಟ್ಸ್​​ಆ್ಯಪ್​​​ ಮೆಸೇಜ್​ಗೂ ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದಾರೆ.

A baton on a building worker
ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್​​

By

Published : Apr 10, 2020, 6:31 PM IST

ಗಂಗಾವತಿ: ಹೊಸಳ್ಳಿ ಗ್ರಾಮದ ಕಟ್ಟಡ ಕಾರ್ಮಿಕ ಶಿವರಾಜ್ ಎಂಬಾತ ನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಬಂದಾಗ ವಿಚಾರಣೆ ನಡೆಸದೇ ಪೊಲೀಸರು ಲಾಠಿ ಬೀಸಿದ್ದಾರೆ. ಈ ಕುರಿತು ನೋವುತೋಡಿಕೊಂಡು ವಾಟ್ಸ್​​​ಆ್ಯಪ್​ ಮೂಲಕ ದೂರು ನೀಡಿದ ಕಾರ್ಮಿಕನಿಗೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್​​​​​​ ಸ್ಪಂದಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ವಾಟ್ಸ್​​ಆ್ಯಪ್​​​ನಲ್ಲಿ ನೀಡಿದ ದೂರು

ವಿನಾಕಾರಣ ಲಾಠಿ ಚಾರ್ಜ್​​​ ಮಾಡಿದ ಘಟನೆ ವಿಚಾರಣೆಗೆ ಎಸ್ಪಿಗೆ ಸೂಚಿಸುತ್ತೇನೆ ಎಂದು ಕಾರ್ಮಿಕ ಕಳುಹಿಸಿದ್ದ ಮೆಸೇಜ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಯುವಕನನ್ನು ಸಂಪರ್ಕಿಸಿ ಅಗತ್ಯ ಏರ್ಪಾಟು ಮಾಡುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೂರು ನೀಡಿದ ಕಾರ್ಮಿಕ

ತಾಲೂಕು ಪಂಚಾಯಿತಿ ಇಒ ಮೋಹನ್, ಯುವಕನನ್ನು ಸಂಪರ್ಕಿಸಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಿದ್ದು, ಹೊರಗೆ ಬಾರದಂತೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ABOUT THE AUTHOR

...view details